ಬೆಂಗಳೂರು: ಕಚೇರಿಯಲ್ಲೇ ಡಿಸಿಆರ್ಇ ಡಿಜಿಪಿ ರಾಮಚಂದ್ರ ರಾವ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ (Video viral). ಆದ್ರೆ ಇದು ರನ್ಯಾ ರಾವ್‌ ಚಿನ್ನ ಪ್ರಕರಣಕ್ಕೂ ಮುನ್ನ ನಡೆದಿರೋದು ಎನ್ನಲಾಗ್ತಿದೆ.

ಇದರ ವಿಡಿಯೋವನ್ನು ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲೇ ಮಹಿಳೆಯರೊಂದಿಗೆ ಕಿಸ್‌ ಕೊಟ್ಟು ಅಸಭ್ಯವಾಗಿ ವರ್ತಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಹಲ್‌ಚಲ್‌ ಎಬ್ಬಿಸಿದೆ (video viral). ಮತ್ತೆ ಈ ವಿಡಿಯೋ ವೈರಲ್‌ ಆಗಿದ್ದು, ಪೊಲೀಸ್‌ ಇಲಾಖೆಯ ಮಾನ ಹರಾಜು ಹಾಕಿದೆ.

ಇದನ್ನು ಓದಿ: Bhatkal GSB/ ಭಟ್ಕಳ ಜಿ ಎಸ್ ಬಿ ವಾರ್ಷಿಕೋತ್ಸವ ಸಂಪನ್ನ

ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ.ಇತ್ತ ಮಗಳು ರನ್ಯಾ ರಾವ್‌ ಸ್ಮಗಿಂಗ್‌ ಕೇಸ್‌ನಲ್ಲಿ ಜೈಲಿನಲ್ಲಿ ಹೊರಗೆ ಬರಲಾರದೆ ಒದಾಡ್ತಿದ್ದಾರೆ. ಇತ್ತ ಮಲತಂದೆ ರಾಮಚಂದ್ರ ರಾವ್‌ ಮಹಿಳೆಯರಿಗೆ ಮುತ್ತಿಟ್ಟು ರಾಸಲೀಲೆ ಆಡಿರುವ ವೀಡಿಯೋ ಭಾರೀ ಸದ್ದು ಮಾಡ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಇದುವರೆಗೂ ಯಾವೂದೇ ದೂರು ದಾಖಲಾಗಿಲ್ಲ

ಇದನ್ನು ಓದಿ: Kalabhairava/ ಜ 28ರಂದು ಗೋಕರ್ಣದಲ್ಲಿ ಕಾಲಭೈರವ ಉತ್ಸವ

ಈ ರಾಮಚಂದ್ರ ರಾವ್ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. 2023ರಲ್ಲಿ ಇವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಡಿಜಿಪಿ ಮತ್ತು ಅಧ್ಯಕ್ಷ ಮತ್ತು ಎಂಡಿ ಆಗಿ ಬಡ್ತಿ ನೀಡಲಾಗಿತ್ತು. ಇನ್ನೂ, ರನ್ಯಾ ರಾವ್‌ (Ranya Rao) ಪ್ರಕರಣ ಸಂಬಂಧ ಪೊಲೀಸರ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಕಳೆದ ವರ್ಷ ಇವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು.

ಇದನ್ನು ಓದಿ: Kogti Jathre/ ಕೋಗ್ತಿ ಜಾತ್ರೆ ಸಂಪನ್ನ