ಭಟ್ಕಳ: ನಗರಸಭೆ ವ್ಯಾಪ್ತಿಯ ಮಣಕುಳಿ ಭಾಗದಲ್ಲಿ ಗಟಾರಿನಲ್ಲಿ ಒಳಚರಂಡಿ ನೀರು (sewage water) ಹರಿದು ಬಾವಿ ಕಲುಷಿತಗೊಂಡಿದ್ದರೂ ಭಟ್ಕಳ ನಗರಸಭೆ ಅಧಿಕಾರಿಗಳು (municipal officials) ಕಣ್ಣು, ಕಿವಿಯಿದ್ದೂ ಕುರುಡ, ಕಿವುಡನಂತೆ ವರ್ತಿಸುತ್ತಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾರುತಿ ನಗರದ ತೆರೆದ ಚರಂಡಿಯಲ್ಲಿ ಗಲೀಜು ನೀರು ಬಂದು ನಿಂತಿದ್ದು, ಈ ಕುರಿತು ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ರವಿ ಆಚಾರ್ಯ ನಗರಸಭೆಗೆ ಲಿಖಿತ ಪತ್ರ ನೀಡಿ ಆಗ್ರಹಿಸಿದ್ದರು. ಈ ಬಗ್ಗೆ ಅಧಿಕಾರಿಗಳು (municipal officials) ಸ್ಪಂದಿಸದೇ ಇದ್ದಾಗ ಸ್ಥಳೀಯ ನಿವಾಸಿಗಳೊಂದಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದರು. ಇಲ್ಲಿನ ಸಮಸ್ಯೆ ಬಗ್ಗೆ ‘ಭಟ್ಕಳ ಡೈರಿ’ಯಲ್ಲಿ ಸಚಿತ್ರ ಮತ್ತು ವಿಡಿಯೋ ವರದಿ ಪ್ರಕಟಗೊಂಡಿತ್ತು. ಆದರೂ ನಗರಸಭೆ ಅಧಿಕಾರಿಗಳು ಕುಂಭಕರ್ಣನಂತೆ ನಿದ್ದೆಯಲ್ಲಿದ್ದಾರೆ.
College Student/ ಭಟ್ಕಳದ ಕಾಲೇಜು ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ
ಈ ಸಮಸ್ಯೆ ಮಣಕುಳಿ ಭಾಗದಲ್ಲಿ ಮತ್ತಷ್ಟು ವ್ಯಾಪಿಸಿದೆ. ಅಧಿಕಾರಿಗಳ ವರ್ತನೆಗೆ ರೋಸಿಹೋಗಿರುವ ಸ್ಥಳೀಯರು, ನಗರಸಭೆಯ ಪೌರಾಯುಕ್ತರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸರಿಪಡಿಸಿಕೊಳ್ಳದಿದ್ದಲ್ಲಿ ಜೂ ೧೫ರ ಸೋಮವಾರ ಬೆಳಿಗ್ಗೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ (National Highway) ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಮತ್ತು ಆ ಸಂದರ್ಭದಲ್ಲಿ ಏನೇ ಅನಾಹುತ ನಡೆದರೂ ಅದಕ್ಕೆ ನಗರಸಭೆ ಅಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
Tahsildar/ ಭಟ್ಕಳಕ್ಕೆ ಪ್ರಭಾರಿ ತಹಶೀಲ್ದಾರ
ಮಣಕುಳಿಯ ಪುಷ್ಪಾಂಜಲಿ ಟಾಕೀಸ್ಗೆ ಹೋಗುವ ರಸ್ತೆಯ ಗಟಾರಿನಲ್ಲಿ ಕಳೆದ ಒಂದು ತಿಂಗಳಿನಿಂದ ಒಳಚರಂಡಿ ನೀರು ಸೋರಿಕೆಯಾಗಿ ಹರಿಯುತ್ತಿದೆ. ಇದರಿಂದಾಗಿ ಗಬ್ಬು ನಾರುತಿದ್ದು, ಈ ರಸ್ತೆಯಲ್ಲಿ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ನಿಲ್ದಾಣಕ್ಕೆ (railway station) ಹೋಗುವ ಪ್ರಯಾಣಿಕರು, ಸ್ಥಳೀಯ ಸಾರ್ವಜನಿಕರು ಮೂಗು ಹಿಡಿದುಕೊಂಡು ಹೋಗುವ ಸ್ಥಿತಿ ಇದೆ. ಅಲ್ಲದೆ ಗಟಾರಿನಲ್ಲಿ ಹರಿಯುತ್ತಿರುವ ಈ ಮಲೀನ ನೀರು ಸ್ಥಳೀಯ ಬಾವಿಗಳಿಗೆ ಸೋರಿಕೆಯಾಗಿ ಬಾವಿ ನೀರು ಕಲುಷಿತಗೊಂಡಿದೆ. ಮಳೆಗಾಲದಲ್ಲಿ ಬಾವಿ ನೀರು ತುಂಬಿರುವ ಈ ಸಮಯದಲ್ಲಿ ಕಲುಷಿತ ನೀರು ಸೇರ್ಪಡೆಯಾದ ಕಾರಣ ನೀರು ಖಾಲಿ ಮಾಡದ ಸ್ಥಿತಿಯಲ್ಲಿ ಗ್ರಾಮಸ್ಥರಿದ್ದಾರೆ. ಅಲ್ಲದೇ ಈ ನೀರು ಕುಡಿದು ಅಸ್ವಸ್ಥರಾಗುವ ಭೀತಿ ಸ್ಥಳೀಯರಿಗಿದ್ದು, ನಗರಸಭೆಯ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಕೂಡಲೇ ಪರಿಶೀಲನೆ ನಡೆಸಿ ತ್ಯಾಜ್ಯ ನೀರು ಗಟಾರಿನಲ್ಲಿ ನಿಲ್ಲದಂತೆ ಚೇಂಬರ್ ಸೋರಿಕೆ ಸರಿಪಡಿಸಬೇಕು. ಮಲೀನವಾದ ಬಾವಿಗಳನ್ನು ಸ್ವಚ್ಚಗೊಳಿಸಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಪರಮೇಶ್ವರ ನಾಯ್ಕ, ಸುರೇಶ ನಾಯ್ಕ, ದಿನೇಶ ನಾಯ್ಕ, ನಾಗರಾಜ ನಾಯಕ, ಅನಂತ ದೇವಾಡಿಗ, ಶೇಖರ ನಾಯ್ಕ, ರಮೇಶ ನಾಯ್ಕ, ಈಶ್ವರ ನಾಯ್ಕ, ಕಿಶೋರ ನಾಯ್ಕ, ಮನೋಜ ನಾಯ್ಕ, ಮಾದೇವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Dirty water/ ತೆರೆದ ಚರಂಡಿಯಲ್ಲಿ ಗಲೀಜು ನೀರು: ಮಾರುತಿ ನಗರದಲ್ಲಿ ಅವ್ಯವಸ್ಥೆ


