ಭಟ್ಕಳ: ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಫಲಿತಾಂಶದಲ್ಲಿ (ICSE result) ಸತತ ೧೨ನೇ ಸಾಲಿನಲ್ಲೂ ಶೇ ೧೦೦ ಫಲಿತಾಂಶ ಪಡೆದು ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿಗಳಾದ ಇಬ್ರಾಹಿಂ ಶೇಖ್ ೯೫.೬%, ಪೂರ್ವಿ ಹೆಗಡೆ ೯೪.೪, ಸಿ ಎನ್ ತನ್ವಿತಾ ೯೪%, ಧನ್ಯಾ ರಾಜು ನಾಯ್ಕ ೯೩.೬%, ಅಂಕಿತಾ ಉದಯ ನಾಯ್ಕ ೯೩.೪%, ಅನನ್ಯಾ ಕಾರ್ಕಳ ೯೨.೮%, ವಿಹಾ ವಿರೇಂದ್ರ ಶಾನಬಾಗ ೯೨%, ನಿಶತ್ ಕೌಸರ್ ೯೧.೨%, ಐಶ್ವರ್ಯ ಆನಂದ ದೇವಡಿಗ ೯೦.೮%, ಚೈತ್ರಾ  ಚಂದ್ರಕಾಂತ ಚಿತ್ರಾಪುರ ೯೦%, ಸಮರ್ಥ ಮಾಸ್ತಿ ಗೊಂಡ ೯೦% ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪರೀಕ್ಷೆಗೆ ಹಾಜರಾದ ಒಟ್ಟೂ ೩೨ ವಿದ್ಯಾರ್ಥಿಗಳಲ್ಲಿ ೧೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡರೆ, ಉಳಿದ ೧೪ ವಿದ್ಯಾರ್ಥಿಗಳು ಶೇಕಡಾ ೭೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ (ICSE result). ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕವೃಂದ ಹಾಗೂ ಪಾಲಕರು ಸಂತೋಷ ವ್ಯಕ್ತಪಡಿಸಿದ್ದಾರೆ.

PUC result/ ಮರುಮೌಲ್ಯಮಾಪನ ಫಲಿತಾಂಶದಲ್ಲಿ ರಾಜ್ಯಕ್ಕೆ 6ನೇ ಸ್ಥಾನ: ಭಟ್ಕಳದ ತೇಜಸ್ ಸಾಧನೆ