ಭಟ್ಕಳ: ಇಲ್ಲಿನ ಮಾರುತಿ ನಗರದಲ್ಲಿ ತೆರೆದ ಚರಂಡಿಯಲ್ಲಿ ಗಲೀಜು ನೀರು (Dirty water) ಬಂದು ನಿಂತಿದ್ದು, ಈ ಕುರಿತು ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ನಗರಸಭೆ ವ್ಯಾಪ್ತಿಯ ಮಾರುತಿನಗರದಲ್ಲಿ ರಾಷ್ಟ್ರೀಯ ಹೆದ್ದಾರಿ (National Highway) ೬೬ರ ಪಕ್ಕದಲ್ಲಿ ಇರುವ ತೆರೆದ ಚರಂಡಿಯಲ್ಲಿ ಇಷ್ಟು ವರ್ಷಗಳು ಕಳೆದರೂ ಕೂಡ ಗಲೀಜು ನೀರು (Dirty water) ಬಂದು ನಿಂತಿರಲಿಲ್ಲ. ಆದರೆ ಈಗ ಪುಷ್ಪಾಂಜಲಿ ಕ್ರಾಸ್ ನಿಂದ ಅವತಾರ ಸಿಲ್ಕ್ಸ್ ವರೆಗೆ ಗಲೀಜು ನೀರು ನಿಂತು ಕೆಟ್ಟ ವಾಸನೆ ಬರುತ್ತಿದ್ದು, ಸೊಳ್ಳೆಗಳು ಕೂಡ ಬೆಳೆದು ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Murinakatte/ ಶೀಘ್ರದಲ್ಲೇ ಮುರಿನಕಟ್ಟೆ ಮರುನಿರ್ಮಾಣ: ಸಂಸದ ಕಾಗೇರಿ

“ನನ್ನ ಮನೆಯಲ್ಲಿ ವಯೋವೃದ್ಧ ಸದಸ್ಯರು, ಚಿಕ್ಕ ಮಕ್ಕಳು ವಾಸಿಸಲು ತೊಂದರೆಯಾಗುತ್ತಿದೆ. ಅಲ್ಲದೇ ನಮ್ಮ ಮನೆಯ ಸದಸ್ಯರಿಗೆ ಮಾರಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಂದೇಹವಿದೆ” ಸಮೀಪದ ನಿವಾಸಿ ರವಿ ಆಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ.

Fine/ ಅಪ್ರಾಪ್ತಗೆ ಬೈಕ್ ಕೊಟ್ಟ ಮಹಿಳೆಗೆ ದಂಡ

ಭಟ್ಕಳ ನಗರಸಭೆಗೆ ಹಿಡಿ ಶಾಪ ಹಾಕುತ್ತಿರುವ ನಿವಾಸಿಗಳು, ಈ ಗಲೀಜು ನೀರು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ತನಿಖೆ ಮಾಡಿ, ಈ ಗಲೀಜು ನೀರನ್ನು ಇನ್ನು ಮುಂದೆ ಈ ತೆರೆದ ಚರಂಡಿಯಲ್ಲಿ ಬಿಡದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.