ಸೊರಬ : ರಾಹುಲ್ ಗಾಂಧಿಗೆ ಸದ್ಬುದ್ಧಿ ದೊರೆಯಲಿ ಎಂದು ಆಶಿಸಿ ಪಟ್ಟಣದ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿರುವ ಬಿಜೆಪಿ ಮಹಿಳಾ ಘಟಕ, ಶಕ್ತಿ ವಿನಾಶದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ : ಇಂಧನ ತುಂಬಿದ ಟ್ಯಾಂಕರ್ ಮಗುಚಿಬಿದ್ದು ಆತಂಕ

ನಂತರ ಮಾತನಾಡಿದ ತಾಲೂಕು ಬಿಜೆಪಿ ಮಹಿಳಾ ಅಧ್ಯಕ್ಷೆ ಹೊಳಿಯಮ್ಮ ಚನ್ನಪಟ್ಟಣ, ನಾವು ಶಕ್ತಿ ಉಪಾಸನೆ ಮಾಡುವ ದೇವಿಯ ಆರಾಧಕರು. ಮಹಿಳೆಯರು, ತಾಯಿ, ಸಹೋದರಿ, ಮಗಳು ಶಕ್ತಿಯ ಸಂಕೇತ. ಈ ಶಕ್ತಿ ಆರಾಧನೆಯ ಕುರಿತು ಕ್ಷುಲ್ಲಕವಾಗಿ ಮಾತನಾಡಿದ ಹಿಂದು ಸಮಾಜದ ನಂಬಿಕೆಗಳನ್ನು ನಾಶ ಮಾಡಲು ಹೊರಟ ರಾಹುಲ್ ಗಾಂಧಿಗೆ ದೇವರು ಸದ್ಬುದ್ದಿ ನೀಡಲಿ ಎಂದರು.

ಈ ವಿಡಿಯೋ ನೋಡಿ : ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರಗೆ ಅದ್ದೂರಿ ಸ್ವಾಗತ https://fb.watch/qWGMODayve/?mibextid=Nif5oz

ಹಿಂದೂ ಸಮಾಜವನ್ನು ಅಂತ್ಯ ಮಾಡಲು ರಾಹುಲ್ ಗಾಂಧಿ ನೇತೃತ್ವದ ಇಂಡಿ ಒಕ್ಕೂಟ ಸಂಕಲ್ಪ ಮಾಡಿದೆ. ಹಿಂದು ಧರ್ಮದ ಶಕ್ತಿ ಆರಾಧನೆಯ ಬಗ್ಗೆ ಲಘುವಾಗಿ ಮಾತನಾಡಿರುವುದರ ಹಿಂದೆ ಭಾರತೀಯ ಸಂಸ್ಕೃತಿಯ ನಾಶ ಮಾಡುವ ಹಿಡನ್ ಅಜೆಂಡಾ ಅಡಗಿದೆ. ಇಂಡಿ ಒಕ್ಕೂಟ ತಮ್ಮ ಪ್ರಣಾಳಿಕೆಯಲ್ಲಿ ಶಕ್ತಿಯನ್ನು ಮುಗಿಸುತ್ತೇವೆ ಎಂದು ಹೇಳಿದೆ. ಆದರೆ ಅದಕ್ಕೆ ಭಾರತೀಯ ನಾರಿ ಶಕ್ತಿ ಅವಕಾಶ ಕೊಡುವುದಿಲ್ಲ ಎಂದರು.

ಪ್ರಧಾನ ಕಾರ್ಯದರ್ಶಿ ಭಾಗ್ಯ ಪ್ರಶಾಂತ, ಶಿಲ್ಪಾ ರವಿ, ಪ್ರಮುಖರಾದ ಆಶಕ್ಕ, ಗೌರಮ್ಮ, ಸುಧ, ರೇವತಿ, ಸವಿತ, ಭವಾನಿ, ಪುರಸಭೆ ಸದಸ್ಯೆ ಜಯಲಕ್ಷ್ಮಿ ಇದ್ದರು.