ಬೆಂಗಳೂರು : ಮುರುಡೇಶ್ವರದ ನಿರ್ಮಾತೃ ದಿವಂಗತ ಆರ್.ಎನ್.ಶೆಟ್ಟಿಯವರ ಧರ್ಮಪತ್ನಿ ಸುಧಾ ಆರ್.ಎನ್.ಶೆಟ್ಟಿ ಇಂದು(ಏ.೧೧) ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇದನ್ನೂ ಓದಿ : ರಘುನಾಥ ಪಿ. ರಾಯ್ಕರ್ ನಿಧನ
ಪತಿಯಂತೆ ಮಹಾದಾನಿಯಾಗಿದ್ದ ಸುಧಾ ಆರ್.ಎನ್.ಶೆಟ್ಟಿ ಸಮಾಜದ ಏಳ್ಗೆಗಾಗಿ ಸದಾಕಾಲ ಸಹಾಯ ಹಸ್ತ ಚಾಚಿದ್ದರು. ಮೃತರ ಅಂತಿಮ ಯಾತ್ರೆ ನಾಳೆ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ. ಬೆಂಗಳೂರಿನ ಸ್ವಗೃಹದಿಂದ ಹೊರಟು ಉತ್ತರಹಳ್ಳಿ ರಸ್ತೆಯ ಆರ್. ಎನ್. ಶೆಟ್ಟಿ ಇಂಜನಿಯರಿಂಗ್ ಕಾಲೇಜಿನ ಆವರಣದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನ ಜರುಗುವುದು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ