ಭಟ್ಕಳ : ಲೋಕಕಲ್ಯಾಣಕ್ಕಾಗಿ ಚಾತುರ್ಮಾಸ್ಯ ವೃತವನ್ನು ಈ ಸಲ ಭಟ್ಕಳದ ಕರಿಕಲ್ ಧ್ಯಾನ ಮಂದಿರದಲ್ಲಿ ಆಚರಣೆ ಮಾಡಲು ನಿರ್ಧರಿಸಿರುವುದಾಗಿ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ಪಟ್ಟಣದ ಆಸರಕೇರಿಯ ನಾಮಧಾರಿ ಗುರುಮಠದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬ್ರಹ್ಮಾನಂದ ಸರಸ್ವತಿ ಶ್ರೀಗಳು ಮಾತನಾಡಿದರು. ತಲೆತಲಾಂತರದಿಂದ ಚಾತುರ್ಮಾಸ್ಯವನ್ನು ಆಚರಿಸಲಾಗುತ್ತಿದೆ. ಮಹಾಭಾರತದಲ್ಲಿಯೂ ಚಾತುರ್ಮಾಸ್ಯದ ಆಚರಣೆಯ ಬಗ್ಗೆ ಉಲ್ಲೇಖವಿದೆ. ಚಾತುರ್ಮಾಸ್ಯ ವೃತಕ್ಕೆ ವಿಶೇಷ ಮಹತ್ವ, ಅರ್ಥ ಇದೆ. ಈ ಸಲ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವೃತ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಆಸರಕೇರಿ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹಿಂದುಳಿದ ವರ್ಗದವರು ಚಾತುರ್ಮಾಸ್ಯವನ್ನು ಜು. ೨೧ರಂದು ಕರಿಕಲ್ ಧ್ಯಾನ ಮಂದಿರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸಾನಿಧ್ಯದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಮಾಜದ ಪ್ರತಿ ಕೂಟದವರು ಸಹಕಾರ ನೀಡಬೇಕೆಂದರು.

ಇದನ್ನೂ ಓದಿ : ಬಸ್ ನಿಲುಗಡೆ ನಾಮಫಲಕ ಉದ್ಘಾಟನೆ

ಸಭೆಯಲ್ಲಿ ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ, ಹಿರಿಯರಾದ ಡಿ.ಬಿ.ನಾಯ್ಕ, ಪ್ರಮುಖರಾದ ಎಸ್.ಎಂ.ನಾಯ್ಕ, ಈರಪ್ಪ ಗರ್ಡಿಕರ, ಕೆ.ಆರ್. ನಾಯ್ಕ, ಈಶ್ವರ ನಾಯ್ಕ, ರಾಜೇಶ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ವಿಠ್ಠಲ ನಾಯ್ಕ, ಭವಾನಿಶಂಕರ ನಾಯ್ಕ, ಸತೀಶಕುಮಾರ ನಾಯ್ಕ, ಶ್ರೀಕಾಂತ ನಾಯ್ಕ, ಡಿ.ಎಲ್.ನಾಯ್ಕ, ಶಿವರಾಮ ನಾಯ್ಕ, ಎಂ.ಕೆ.ನಾಯ್ಕ, ವಿವಿಧ ಕೂಟಗಳ ಪ್ರಮುಖರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಸ್ವಾಗತಿಸಿದರು.

ಇದನ್ನೂ ಓದಿ : ವಧೆ ಮಾಡುವ ಉದ್ದೇಶದಿಂದ ತಂದಿದ್ದ ಎತ್ತುಗಳ ರಕ್ಷಣೆ