ಭಟ್ಕಳ (Bhatkal): ಶ್ರೀ ಗುರು ರಾಘವೇಂದ್ರ (Guru Raghavendra) ಸಾರ್ವಭೌಮರ ೩೫೩ನೇ ಆರಾಧನಾ ಮಹೋತ್ಸವವು (Aradhana Mahotsava) ಇಲ್ಲಿನ ಮಾರುತಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಲಿದೆ. ಆ.೨೦ರಿಂದ ೨೩ರವರೆಗೆ ಮೂರು ದಿನಗಳ ಕಾಲ ಶ್ರೀಮಠದ ವೃಂದಾವನ ಸನ್ನಿಧಾನದಲ್ಲಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆ.೨೦ರಂದು ಬೆಳಿಗ್ಗೆ ೮ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಆರಾಧನಾ ಮಹೋತ್ಸವ (Aradhana Mahotsava) ಆರಂಭಗೊಳ್ಳಲಿದೆ. ೮.೩೦ರಿಂದ ೧೧ರವರೆಗೆ ಭಕ್ತರ ಹಸ್ತದಿಂದ ಶ್ರೀಗುರು ಸಾರ್ವಭೌಮರ ಪಾದ್ಯಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನೆರವೇರುವುದು. ಸಂಜೆ ೭ರಿಂದ ಭಜನೆ, ರಾತ್ರಿ ೮ಕ್ಕೆ ರಥೋತ್ಸವ ಮಹಾಪೂಜೆ, ಪ್ರಸಾದ ವಿತರಣೆ ಇರುವುದು.
ಇದನ್ನೂ ಓದಿ : ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಸಾಧನೆ
ಎರಡನೇ ದಿನ ಆ.೨೧ರಂದು ಬೆಳಿಗ್ಗೆ ೭.೩೦ಕ್ಕೆ ದೇವತಾ ಪ್ರಾರ್ಥನೆ, ನಂತರ ಭಕ್ತಾದಿಗಳ ಹಸ್ತದಿಂದ ಶ್ರೀ ಗುರು ಸಾರ್ವಭೌಮರ ಪಾದ್ಯಪೂಜೆ ನಡೆಯುವುದು. ಬೆಳಿಗ್ಗೆ ೯ಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅಖಂಡ ಭಜನೆ ಪ್ರಾರಂಭ ಆಗಲಿದೆ. ೧ರಿಂದ ೩ರವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೮ಕ್ಕೆ ರಥೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ಜರುಗುವುದು.
ಇದನ್ನೂ ಓದಿ : ಸಂಭ್ರಮದ ನೂಲು ಹುಣ್ಣಿಮೆ ಆಚರಣೆ
ಮೂರನೇ ದಿನ ಆ. ೨೨ರಂದು ಬೆಳಿಗ್ಗೆ ೮ರಿಂದ ದೇವತಾ ಪ್ರಾರ್ಥನೆ, ನಂತರ ಭಕ್ತಾದಿಗಳ ಹಸ್ತದಿಂದ ಶ್ರೀ ಗುರು ಸಾರ್ವಭೌಮರ ಪಾದ್ಯಪೂಜೆ ಮತ್ತು ವಿಶೇಷ ಕ್ಷೀರಾಭಿಷೇಕ ನಡೆಯುವುದು. ೧೦ರಿಂದ ಸಾಮೂಹಿಕ ಗಣಹೋಮ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಜರುಗುವುದು. ಸಾಯಂಕಾಲ ೭ ರಿಂದ ೮ರ ವರೆಗೆ ಭಜನೆ ನಡೆಯಲಿದೆ. ರಾತ್ರಿ ೮ಕ್ಕೆ ರಥೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯುವುದು.
ಇದನ್ನೂ ಓದಿ : ಕಾರು ಡಿಕ್ಕಿಯಾಗಿ ವೃದ್ಧೆಗೆ ಗಾಯ
ಆರಾಧನಾ ಮಹೋತ್ಸವ ಸಮಯದಲ್ಲಿ ಶ್ರೀ ಮಠದಲ್ಲಿ ಜರಗುವ ವಿಶೇಷ ರಥೋತ್ಸವ ಸೇವೆ, ಮಹಾಪೂಜೆ, ಅಲಂಕಾರ ಸಹಿತ ಪೂಜೆ, ಸಾಮೂಹಿಕ ರಥೋತ್ಸವ, ಸಾಮೂಹಿಕ ಗಣಹೋಮ, ವಿಶೇಷ ಪಾದ್ಯ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ, ವಿಶೇಷ ಕ್ಷೀರಾಭಿಷೇಕ, ವಿಶೇಷ ಪಂಚಾಮೃತ, ಹಯಗ್ರೀವ ನೈವೇದ್ಯ ಮತ್ತಿತರ ವಿಶೇಷ ಸೇವೆಗಳು ನಡೆಯಲಿವೆ.