ಭಟ್ಕಳ(Bhatkal) : ನಾರಾಯಣ ಗುರು (Narayan guru) ಜಯಂತ್ಯುತ್ಸವದ ಅಂಗವಾಗಿ ಭಟ್ಕಳ ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ “ಸಾಮಾಜಿಕ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಚಿಂತನೆ” ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ (essay competition) ಏರ್ಪಡಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸ್ಪರ್ಧೆಯು (competition) ಆಗಸ್ಟ್ ೨೪ ರಂದು ಶನಿವಾರ ನಗರದ ವಿದ್ಯಾಭಾರತಿ ಹೈಸ್ಕೂಲ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಗಸ್ಟ್ ೨೩ನೇ ತಾರೀಖಿನ ಶುಕ್ರವಾರ ಸಾಯಂಕಾಲ ೫ ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಲು ಕೋರಲಾಗಿದೆ.

ಇದನ್ನೂ ಓದಿ :  ಎದೆನೋವಿನಿಂದ ಮೀನುಗಾರ ಸಾವು

ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಆಗಸ್ಟ್ ೨೫ನೇ ತಾರೀಕಿನಂದು ನಡೆಯುವ ನಾರಾಯಣ ಗುರು ಜಯಂತ್ಯುತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ : ಅಂಜುಮನ್ ಮಹಿಳಾ ಪದವಿ ಕಾಲೇಜಿನಲ್ಲಿ ಡಿಸಿ ಲಕ್ಷ್ಮಿಪ್ರಿಯಾ

ಭಟ್ಕಳದ ಕರಿಕಲ್ ನಲ್ಲಿರುವ ಧ್ಯಾನ ಮಂದಿರದಲ್ಲಿ ಆಗಸ್ಟ ೨೫ರಂದು ನಾರಾಯಣ ಗುರು ಜಯಂತ್ಯುತ್ಸವವು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ. ತಾಲೂಕು ನಾರಾಯಣ ಗುರು (Narayan guru) ಜಯಂತ್ಯುತ್ಸವ ಸಮಿತಿ ಹಾಗೂ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ : ಅಂಜುಮನ್ ಮಹಿಳಾ ಪದವಿ ಕಾಲೇಜಿನಲ್ಲಿ ಡಿಸಿ ಲಕ್ಷ್ಮಿಪ್ರಿಯಾ

ಪ್ರತಿ ಕಾಲೇಜಿನಿಂದ ಗರಿಷ್ಠ ಮೂರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ೫ ನಿಮಿಷಗಳ ಕಾಲಮಿತಿಯಲ್ಲಿ ವಿದ್ಯಾರ್ಥಿಗಳು ಭಾಷಣವನ್ನು ಪ್ರಸ್ತುತಪಡಿಸುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೂಲಕ ಹೆಸರನ್ನು ನೊಂದಾಯಿಸಬೇಕು.

ಇದನ್ನೂ ಓದಿ : ಆಗಸ್ಟ್‌ ೧೯ರಂದು ವಿವಿಧೆಡೆ ಅಡಿಕೆ ಧಾರಣೆ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಮನಮೋಹನ ನಾಯ್ಕ, ಸಂಚಾಲಕರು, ನಾರಾಯಣಗುರು ಜಯಂತ್ಯುತ್ಸವ ಸಮಿತಿ (ದೂ. ೯೯೮೦೪೩೧೯೮೭); ಗಂಗಾಧರ ನಾಯ್ಕ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಭಟ್ಕಳ ತಾಲೂಕು ಘಟಕ (ದೂ. ೮೩೧೦೦೯೩೧೯೮); ಭವಾನಿ ಶಂಕರ ನಾಯ್ಕ, ಉಪಾಧ್ಯಕ್ಷರು, ಸ್ಪಂದನ ಸಂಸ್ಥೆ, ಭಟ್ಕಳ (ದೂ. ೯೯೭೨೨೮೨೯೨೩); ಪಾಂಡುರಂಗ ನಾಯ್ಕ, ಕಾರ್ಯದರ್ಶಿ, ಸ್ಪಂದನ ಸಂಸ್ಥೆ, ಭಟ್ಕಳ (ದೂ.
೯೧೪೧೬೨೯೮೬೧)