ಭಟ್ಕಳ (Bhatkal): ದಾಂಡೇಲಿಯ (Dandeli) ಸಾಹಿತಿ (Writer) ಹಾಗೂ ಪತ್ರಕರ್ತ(Journalist) ಬಿ.ಎನ್.ವಾಸರೆ ಅವರ ಮೇಲೆ ಅಲ್ಲಿನ ಸಿ.ಪಿ.ಐ. ಭೀಮಣ್ಣ ಸೂರಿ ನಡೆಸಿದ ದೌರ್ಜನ್ಯ ಖಂಡಿಸಿ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ (Bhatkal journalist) ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ (Home minister) ಮನವಿ ಸಲ್ಲಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದಾಂಡೇಲಿಯ ಪೊಲೀಸ್ ಇನ್ಸಪೆಕ್ಟರ್ ಭೀಮಣ್ಣ ಸೂರಿ ಅವರು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಬಿ.ಎನ್. ವಾಸರೆ ಅವರನ್ನು ಅಗೌರವವಾಗುವ ರೀತಿಯಲ್ಲಿ ನಡೆಸಿಕೊಂಡಿದ್ದನ್ನು ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸೌಜನ್ಯಯುತವಾಗಿ ವರ್ತಿಸಬೇಕಾದ ಸರಕಾರದ ಓರ್ವ ಅಧಿಕಾರಿಯೇ ಈ ರೀತಿಯಾಗಿ ಪತ್ರಕರ್ತರನ್ನು ನಡೆಸಿಕೊಂಡಿರುವುದು ಸರಕಾರಕ್ಕೆ ಶೋಭೆ ತರುವಂತದ್ದಲ್ಲ. ಪತ್ರಕರ್ತರಿಗೆ ಭದ್ರತೆ ನೀಡಬೇಕಾದ ಅಧಿಕಾರಿಯಿಂದ ಈ ರೀತಿಯ ವರ್ತನೆ ಸಮರ್ಥನೀಯ ಕೂಡ ಅಲ್ಲ. ಜಿಲ್ಲೆಯಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ವದಗಿಸುವುದರೊಂದಿಗೆ ಇಂತಹ ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಬೇಕಾಗಿದೆ. ಅಧಿಕಾರಿಗಳ ಈ ನಡೆಯನ್ನು ನಾವು ತೀವ್ರವಾಗಿ ಖಂಡಿಸಿದ ಸಂಘವು ತಕ್ಷಣ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ : ರೈಲು ಬಡಿದು ವೃದ್ಧೆ ಸಾವು
ಭಟ್ಕಳ ಕಾರ್ಯನಿರತ ಪತ್ರಕರ್ತರ (Bhatkal journalist) ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಮಾತನಾಡಿ, ಪೊಲೀಸ ಇಲಾಖೆ , ವಕೀಲರು ಹಾಗೂ ಪತ್ರಕರ್ತರು ಈ ಮೂವರ ಸಂಬಂಧ ಸಮಾಜದಲ್ಲಿ ಒಳ್ಳೆಯದಾಗಿರಬೇಕು. ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲಿ ನಾವು ಸಹಕಾರದಿಂದ ಕೆಲಸ ಮಾಡಬೇಕು. ಈ ಮೂರು ಕ್ಷೇತ್ರಗಳಲ್ಲಿ ಅಸಮಾಧಾನ ಉಂಟಾದರೆ ಇಡೀ ವ್ಯವಸ್ಥೆ ಹಾಳಾಗುವ ಪರಿಸ್ಥಿತಿ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ನಡೆದ ಈ ಘಟನೆಯನ್ನು ಭಟ್ಕಳದ ಎಲ್ಲಾ ಪತ್ರಕರ್ತರು ಖಂಡಿಸುತ್ತೇವೆ ಹಾಗೂ ಸರ್ಕಾರ ಮತ್ತು ಪೊಲೀಸ ಇಲಾಖೆ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ದೇವಸ್ಥಾನದ ಬಳಿ ಜೂಜಾಡುತ್ತಿದ್ದ ಐವರ ಬಂಧನ
ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಇಂತಹ ಘಟನೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿಯೂ ನಡೆಯಬಾರದು. ಅಧಿಕಾರಿಗಳು ತಮ್ಮ ಈ ತರಹದ ಧೋರಣೆಗಳನ್ನು ಬಡಲಾಯಿಸಿಕೊಳ್ಳಬೇಕು. ಬಿ.ಎನ್.ವಾಸರೆ ಕ.ಸಾ.ಪ.ದ ಜಿಲ್ಲಾಧ್ಯಕ್ಷ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಹಾಗೂ ಬಹಳ ವರ್ಷದಿಂದ ಪತ್ರಕರ್ತರಾಗಿ ಬಹಳ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹವರ ಮೇಲೆ ಇಂತಹ ಘಟನೆ ನಡೆದಿರುವುದು ಭಟ್ಕಳದ ಎಲ್ಲಾ ಪತ್ರಕರ್ತರು ಖಂಡಿಸುತ್ತೇವೆ ಹಾಗೂ ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಜೂಜಾಟ ಅಡ್ಡೆಗೆ ದಾಳಿ; ೯ ಜನರ ಬಂಧನ
ಉಪ ವಿಭಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಸೀಲ್ದಾರ ಕಚೇರಿ ಶಿರಸ್ತೇದಾರ ಪ್ರವೀಣ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶೈಲೇಶ ವೈದ್ಯ, ಉಪಾಧ್ಯಕ್ಷ ಮೋಹನ ನಾಯ್ಕ, ಜಿಲ್ಲಾ ಸಮಿತಿ ಸದಸ್ಯ ಫಯಾಜ್ ಮುಲ್ಲಾ, ಸದಸ್ಯರಾದ ಅತಿಕುರ್‌ರೆಹಮಾನ್, ಇನಾಯತ್‌ವುಲ್ಲಾ ಶಾಬಂದ್ರಿ, ಅಝರ್ ಬರ್ಮಾವರ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಕಾರ್ಯದರ್ಶಿ ಮನಮೋಹನ ನಾಯ್ಕ, ಸದಸ್ಯರಾದ ಪ್ರಸನ್ನ ಭಟ್ಟ, ಎಸ್. ಉದಯ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಮುರ್ಡೇಶ್ವರ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ; ಇಬ್ಬರ ಬಂಧನ