ಗೋಕರ್ಣ(Gokarna): ರಾಮಚಂದ್ರಾಪುರ ಮಠ (Ramachandrapura Math) ಹಾಗೂ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (Mahabaleshwar Temple) ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwar Shri) ನುಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ (Chaturmasya) ವ್ರತ ಕೈಗೊಂಡಿರುವ ಶ್ರೀಗಳು ಗೋಕರ್ಣ ದೇವಾಲಯ ಮತ್ತು ಶ್ರೀಮಠದ ನಡುವಿನ ಸಂಬಂಧದ ಬಗೆಗಿನ ದಾಖಲೆಗಳ ಅನಾವರಣದ ಬಳಿಕ ಆಶೀರ್ವಚನ ನೀಡಿದರು. ಗೋಕರ್ಣ ಮಂಡಲಾಚಾರ್ಯತ್ವ ಮತ್ತು ಮಹಾಬಲೇಶ್ವರನ ವಿಧಿವತ್ತಾದ ಅರ್ಚನೆಯ ಎರಡು ಅನುಜ್ಞೆಯನ್ನು ಶಂಕರರು ನಮ್ಮ ಮಠದ ಪ್ರಥಮಾಚಾರ್ಯರಾದ ವಿದ್ಯಾನಂದರಿಗೆ ನೀಡಿದರು. ಶ್ರೀಸಂಸ್ಥಾನ ಮಹಾಬಲೇಶ್ವರ ದೇವಸ್ಥಾನ (Mahabaleshwar Temple) ಎನ್ನಲಾಗುತ್ತದೆ. ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ಪಡಸಾಲೆಯಲ್ಲಿ ಮಠ ಇತ್ತು. ದೇವಾಲಯ ನಿರ್ವಹಣೆಗಾಗಿಯೇ ಇತ್ತು. ಪೂರ್ವಾಚಾರ್ಯರ ಸಮಾಧಿಗಳೂ ಇಲ್ಲೇ ಇದ್ದವು. ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಗಾಗಿಯೇ ಮಠದಲ್ಲಿ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಪದ್ಧತಿ ಇತ್ತು. ೩೩ನೇ ಯತಿಗಳು ಒಂದು ತಿಂಗಳು ಇಲ್ಲೇ ಇದ್ದು, ರಥವನ್ನು ದುರಸ್ತಿ ಮಾಡಿಸಿದ ನಿದರ್ಶನಗಳಿವೆ ಎಂದು ವಿವರಿಸಿದರು.

ಇದನ್ನೂ ಓದಿ : human chain/ ಮಳೆಯಲ್ಲೇ ನಿಂತ ಶಾಲಾ ಮಕ್ಕಳು

ಧನಮೂಲ ಅಲ್ಲ; ಪ್ರತಿಷ್ಠೆಗಾಗಿ ಅಲ್ಲ. ದೇವರ ಸೇವೆಗೆ ನಾವು ಇರುವವರು. ಅವನ ಇಚ್ಛೆಯಂತೆ ಆಗಲಿ. ನಿಶ್ಚಿಂತೆಯಿಂದ ಪ್ರತೀಕ್ಷೆ ಮಾಡೋಣ. ಪೂರ್ವಪರಂಪರೆಗೆ ಅನುಸಾರವಾಗಿ ಪೂಜೆ, ಉತ್ಸವಗಳು ನಡೆಯಬೇಕು. ದೇವಹಿತ, ಕಿಂಕರಹಿತ ಭಕ್ತಹಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಇಂದು ಅನಾವರಣಗೊಂಡಿರುವ ಈ ದಾಖಲೆಗಳು ಪ್ರಶ್ನಾತೀತ. – ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ಇದನ್ನೂ ಓದಿ :  ಕಾಮುಕ ಶಿಕ್ಷಕ ಸಾದಿಕ್‌ ಅಮಾನತು

ಮಾಜಿ ಸಚಿವ ಆರ್.ವಿ.ದೇಶಪಾಂಡೆ (RV Deshpande)  ಶ್ರೀಗಳ ಆಶೀರ್ವಾದ ಪಡೆದರು. ೩೪ನೇ ಗುರುಗಳ ಪೂರ್ವಾಶ್ರಮ ಪರಂಪರೆಯ ವಿನಾಯಕ ರಮಣಿ ಭಟ್ ಗೋಕರ್ಣದ ದಾಖಲೆಗಳನ್ನು ಅನಾವರಣಗೊಳಿಸಿದರು. ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಳ್ಳೇರಿಯಾ ಮಂಡಲದ ಪ್ರಧಾನ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಗುರಿಕ್ಕಾರರ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಇದನ್ನೂ ಓದಿ :  ಅರಣ್ಯದಲ್ಲಿ ಇಸ್ಪೀಟ್‌ ಆಡುತ್ತಿದ್ದಾಗ ಪೊಲೀಸ್‌ ದಾಳಿ

ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.