ಅಂಕೋಲಾ (Ankola) : ಸಹಾಯ ಮಾಡು ನೆಪದಲ್ಲಿ ಎಟಿಎಂ ಕಾರ್ಡ್‌ (ATM card) ಲಪಟಾಯಿಸಿ ನಿವೃತ್ತ ನೌಕರನ ಖಾತೆಯಿಂದ ೩೭ ಸಾ.ರೂ. ಹಣ ಪಡೆದಿರುವ ಬಗ್ಗೆ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಕೋಲಾ ತಾಲೂಕಿನ ಬೆಳಸೆ ತೆಂಕನಾಡ ನಿವಾಸಿ ದೇವಾ ಲೋಕಪ್ಪ ಗೌಡ (೬೧) ಹಣ ಕಳೆದುಕೊಂಡವರು. ಇವರು ನ.೮ರಂದು ಮಧ್ಯಾಹ್ನ ೧೨.೩೦ರ ಸುಮಾರಿಗೆ ಹಣ ತೆಗೆಯಲು ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಂಕೋಲಾ ಪಟ್ಟಣದ ಕೆ.ಸಿ.ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನ (SBI) ಎಟಿಎಂ ಕೇಂದ್ರದಲ್ಲಿ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ ಸಹಾಯದಿಂದ ಹಣ ತೆಗೆದಿದ್ದರು.

ಇದನ್ನೂ ಓದಿ :  ಸಾರಿಗೆ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು

ಹಣ ಪಡೆದು ಹೊರ ಬರುತ್ತಿರುವಾಗ ಅಲ್ಲಿಯೇ ಒಳಗಡೆ ಇದ್ದ ಅಪರಿಚಿತ ವ್ಯಕ್ತಿ ಎಂಟಿಎಂನಿಂದ ಹಣ ತೆಗೆದುಕೊಂಡ ಬಗ್ಗೆ ಸ್ಟೇಟ್‌ಮೆಂಟ್‌ ಪಡೆಯಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ಅದಕ್ಕೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌(ATM card)  ಪಡೆದು ಮಷಿನ್‌ನಲ್ಲಿ ಹಾಕಿ ಪಾಸವರ್ಡ್‌ ನಮೂದಿಸಲು ತಿಳಿಸಿದ್ದಾನೆ. ಪಾಸವರ್ಡ್‌ ನಮೂದಿಸುತ್ತಿರುವಾಗ ನೋಡಿಕೊಂಡು ಮರಳಿ ಎಟಿಎಂ ಕಾರ್ಡ್‌ ನೀಡುವಾಗ ಬದಲಾಯಿಸಿ ಕೊಟ್ಟಿದ್ದಾನೆ. ಅಪರಿಚಿತ ಕೊಟ್ಟಿದ್ದು ತಮ್ಮದೇ ಕಾರ್ಡ್‌ ಎಂದು ತಿಳಿದು, ಅದನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾರೆ.

ಇದನ್ನೂ ಓದಿ :   ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದೂರು ದಾಖಲು

ಮಧ್ಯಾಹ್ನ ೨ ಗಂಟೆ ಸುಮಾರಿಗೆ ಅವರ ಖಾತೆಯಿಂದ ಹಣ ಕಡಿತವಾದ ಸಂದೇಶ ಬಂದಿದೆ. ಬ್ಯಾಂಕ್‌ಗೆ ಬಂದು ಪರಿಶೀಲಿಸಿದಾಗ ಅವರ ಅಕೌಂಟ್‌ನಿಂದ ೩೭ ಸಾ.ರೂ. ಕಡಿತವಾಗಿರುವುದು ತಿಳಿದುಬಂದಿದೆ. ಅವರದ್ದೇ ಎಟಿಎಂ ಕಾರ್ಡ್‌ನಿಂದ ಹಣ ಕಡಿತವಾಗಿರುವುದು ಗೊತ್ತಾಗಿದೆ. ಆಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಕುರಿತು ದೇವಾ ಗೌಡರ ಅಳಿಯ ಉಮೇಶ ವಾಸು ಗೌಡ ನೀಡಿದ ದೂರಿನಲ್ಲಿ (Complaint) ತಿಳಿಸಿದ್ದಾರೆ. ಅಂಕೋಲಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :   ಆಸ್ಪತ್ರೆ ಅಲೆದಾಟದಲ್ಲೇ ಯುವಕನ ಜೀವ ಹೋಯ್ತು !