ಭಟ್ಕಳ (Bhatkal) : ಕರ್ನಾಟಕ (Karnataka) ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ (Land Act) ನಗರ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶದ ಒಳಗೆ ಅತಿಕ್ರಮಿಸಿದ್ದಲ್ಲಿ ಭೂಗಳ್ಳರೆಂದು ಪರಿಗಣಿಸಿ ಭೂಕಬಳಿಕೆ ಮಾಡುವದು ನಿಷೇಧ ಮತ್ತು ಕಾನೂನು ಬಾಹಿರ ಎಂದು ಗುರುತಿಸಿ ಶಿಕ್ಷೆಗೆ ಒಳಗಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಕಾಯಿದೆ ಸಡಲೀಕರಣ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳದಲ್ಲಿ ಅರಣ್ಯವಾಸಿಗಳಿಗೆ ಗ್ರೀನ್ ಕಾರ್ಡ ವಿತರಣೆ ಮಾಡಿ ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡಿದರು.  ಉದ್ದೇಶಿತ ಕಾನೂನಲ್ಲಿ ನಗರ ಪಾಲಿಕೆ ಪರಿಮಿತಿಯಿಂದ ೧೦ ಕಿ.ಮೀ. ಪರಿಮಿತಿಯೊಳಗಿನ, ನಗರ ಸಭೆಗಳ ಪರಿಮಿತಿಯಿಂದ ೫ ಕಿ.ಮೀ ಒಳಗಿನ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಪರಿಮಿತಿಯಿಂದ ೩ ಕಿಮೀ ಒಳಗಿನ ಸ್ಥಳೀಯ ಪ್ರಾಧಿಕಾರಿಗಳ ಮತ್ತು ಸರ್ಕಾರದ ಒಡೆತನದ ನಿಯಂತ್ರಣ ಮತ್ತು ವ್ಯವಸ್ಥಾಪನೆಯಲ್ಲಿರುವ ಭೂಮಿ ಪ್ರದೇಶದಲ್ಲಿ ಮಂಜೂರಿ ಇಲ್ಲದೆ ಅತಿಕ್ರಮಿಸಿದ್ದಲ್ಲಿ ಸಾಗುವಳಿ ಮಾಡಿದ ಸಾಗುವಳಿದಾರರ ವಿರುದ್ಧ  ಬೆಂಗಳೂರಿನ (Bengaluru) ವಿಶೇಷ ನ್ಯಾಯಾಲಯದಲ್ಲಿ (Special court) ಕ್ರಿಮಿನಲ್ ಪ್ರಕರಣ ದಾಖಲಿಸಲ್ಪಡುತ್ತದೆ ಎಂದು ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಬೈಕುಗಳ ನಡುವೆ ಡಿಕ್ಕಿ; ಮಹಿಳೆಗೆ ಗಾಯ

ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ (Land Act) ದಾಖಲಿಸುವ ಕ್ರಿಮಿನಲ್ ಪ್ರಕರಣದಲ್ಲಿ ೩ ವರ್ಷದವರಿಗೂ ಜೈಲು ಹಾಗೂ ೨೫ ಸಾವಿರ ರೂಪಾಯಿ ದಂಡ ವಿಧಿಸುವ ಶಿಕ್ಷೆಯ ಅಂಶ ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ರವೀಂದ್ರ ನಾಯ್ಕ ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರು ನಾಯ್ಕ ಬೆಳಕೆ, ಶಬ್ಬೀರ್ ಸಾಬ ಭಟ್ಕಳ, ಚಂದ್ರು ನಾಯ್ಕ ಗೊರಟೆ, ದಯಾನಂದ ಹಸರವಳ್ಳಿ, ನಾಗರಾಜ ಹಸರವಳ್ಳಿ, ಸಂತೋಷ ಗೊರಟೆ, ಕಯ್ಯುಮ ಕೋಲಾ ಭಟ್ಕಳ, ರತ್ನಾ ಬೆಳಕೆ, ಮಾದೇವಿ ಕರಿಕಲ್ ಉಪಸ್ಥಿತರಿದ್ದರು.

ಇದನ್ನೂ ಓದಿ : ಭಟ್ಕಳದ ಮೂವರು ಶಂಕಿತ ಭಯೋತ್ಪಾದಕರು ದೋಷಿ