ಭಟ್ಕಳ (Bhatkal): ತಾಲೂಕಿನ ಮುರಿನಕಟ್ಟೆಯಲ್ಲಿ ಮಂಗಳವಾರ ರಾತ್ರಿ ಶ್ರೀ ಮಾರಿಕಾಂಬೆ (Marikambe) ಅಮ್ಮನರ ಹೊರೆ ತೆಗೆಯುವ ವೇಳೆ ಅಲ್ಲಿದ್ದ ಶ್ರೀ ದೇವಿಯ ಮರದ ಗೊಂಬೆ ನಾಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೆಲ ದಿನಗಳ ಹಿಂದಷ್ಟೇ ಆಸರಕೇರಿ ಭಾಗದ ಹಿಂದೂ ಬಾಂಧವರು ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ ಬಳಿ ಇದ್ದ ದೇವಿಯ ೨ ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ ಬಳಿಕ ದೇವಿಯ ಮರದ ಗೊಂಬೆಗೆ ಪೂಜೆ ಸಲ್ಲಿಸಿ ಬಂದಿದ್ದರು. ಮಂಗಳವಾರ ರಾತ್ರಿ ಕಾರಗದ್ದೆ, ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸಲೆಂದು ಬಂದ ವೇಳೆ ಮುರಿನಕಟ್ಟೆಯಲ್ಲಿದ್ದ ೨ ದೇವಿಯ ಮರದ ಗೊಂಬೆಗೆ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ : ಟಿಪ್ಪರ್ ಲಾರಿಗೆ ಭಟ್ಕಳದ ಮೂವರಿದ್ದ ಸ್ಕೂಟರ್‌ ಡಿಕ್ಕಿ

ದೇವಿಯ ಗೊಂಬೆ ನಾಪತ್ತೆ ಸುದ್ದಿ ಎಲ್ಲಾ ಕಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾವಣೆಗೊಂಡು ಕೆಲ ಕಾಲ ಆತಂಕ ಸೃಷ್ಟಿಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದರು. ರಾತ್ರಿಯಾದ ಕಾರಣ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದುಕೊಂಡಿರುವುದರಿಂದ ಪರಿಶೀಲನೆ ಮಾಡಲು ಕಷ್ಟವಾಗಿದ್ದು, ಬೆಳಿಗೆ  ಸ್ಥಳ ಪರಿಶೀಲನೆ ಮಾಡುತ್ತೇವೆ ಎಂದು ಅಲ್ಲಿ ನೆರೆದಿದ್ದ ಹಿಂದೂ ಮುಖಂಡರಿಗೆ ಹೇಳಿದರು. ಈ ಸಂದರ್ಭ ಸ್ಥಳೀಯರಿಗೂ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.   ಈ ಬಗ್ಗೆ ಪ್ರಕರಣ ದಾಖಲು ಮಾಡಿದರೆ, ತನಿಖೆ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ವಿಜೃಂಭಣೆಯಿಂದ ನಡೆದ ವಿದ್ಯೋತ್ಸವ

ಸ್ಥಳದಲ್ಲಿದ್ದ ಹಿಂದೂ ಮುಖಂಡ ಗೋವಿಂದ ನಾಯ್ಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ದೂರವಾಣಿ ಕರೆ ಮಾಡಿ, ಈ ಬಗ್ಗೆ ಸೂಕ್ತವಾಗಿ ತನಿಖೆ ಮಾಡಿ ಒಂದು ವಾರದೊಳಗಾಗಿ ಪ್ರಕರಣ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿದರು. ಬಳಿಕ ಗೋವಿಂದ ನಾಯ್ಕ ಜಮಾವಣೆಗೊಂಡ ಹಿಂದೂ ಬಾಂಧವರಿಗೆ ಈ ಬಗ್ಗೆ ಮಾಹಿತಿ ನೀಡಿ ಮನವೊಲಿಸಿದರು.  ಬಳಿಕ ಸ್ಥಳೀಯರು ಅಲ್ಲಿಂದ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿಕೊಂಡು ವೆಂಕಟಾಪುರ ಗಡಿಭಾಗಕ್ಕೆ ತಲುಪಿಸಿದರು.

ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಕೆಲವೆಡೆ ಮಳೆ ಸಾಧ್ಯತೆ

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ ಮಾತನಾಡಿ, ಮಾರಿ ಹೊರೆಯನ್ನು ತೆಗೆಯುವ ಸಂಪ್ರದಾಯವು ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಭಾಗದಿಂದ ಹೊರಡುವ ಅಮ್ಮನ ಹೊರೆ ಶಿರಸಿ ಮಾರಿಕಾಂಬಾ (Marikambe) ದೇವಸ್ಥಾನಕ್ಕೆ ಹೋಗಿ ತಲುಪುತ್ತದೆ. ತಾಲೂಕಿನ ಎಲ್ಲಾ ಕಡೆಗಳಿಂದ ಬರುವ ಅಮ್ಮನ ಹೊರೆ, ಮುರಿನಕಟ್ಟೆಗೆ ಬಂದು ಅಲ್ಲಿಂದ ಮುಂದೆ ಸಾಗಿಸಲಾಗುತ್ತದೆ. ಈಗ ಇಲ್ಲಿ ಇದ್ದ ೨ ಗೊಂಬೆ ನಾಪತ್ತೆಯಾಗಿದೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಇಷ್ಟು ವರ್ಷದಿಂದ ಇಲ್ಲವಾದ ಅನಾಹುತ ಈಗ ಆಗಿದೆ. ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ನನ್ನೊಂದಿಗೆ ಮಾತನಾಡಿ ಒಂದು ವಾರ ಕಾಲಾವಕಾಶ ಕೊಟ್ಟು, ನಾವೆಲ್ಲ ಸೇರಿ ಇದಕ್ಕೆ ಕಾಯಂ ಪರಿಹಾರ ಹುಡುಕಬೇಕು. ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳಿದಕ್ಕೆ ನಾವು ಈಗ ಶಾಂತರಾಗಿದ್ದೇವೆ ಎಂದರು.

ಇದನ್ನೂ ಓದಿ : Fake News/ ಬೆಂಗಳೂರು ಬಿಟ್ಟರೆ ಉ.ಕ. ಜಿಲ್ಲೆಯಲ್ಲೇ ಹೆಚ್ಚು ಪ್ರಕರಣ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸೇರಿದಂತೆ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು. ಈ ವೇಳೆ ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ, ನಗರ ಮತ್ತು ಗ್ರಾಮೀಣ ಠಾಣೆಯ ಪಿ.ಎಸ್.ಐ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ  ಮತ್ತು ಫೇಸ್‌ಬುಕ್‌ ನಲ್ಲಿ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ಭಟ್ಕಳ ಘಟನೆಗೆ ೬ ಶಿಕ್ಷಕರು ಅಮಾನತು