ಕುಮಟಾ (Kumta) : ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ ಮೇ ೨೪ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಕುಮಟಾ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ (power outage) ಆಗಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾದ ಉಪ ವಿಭಾಗದ ೧೧೦/೩೩/೧೧ ಕೆ.ವಿಕೆ.ಪಿ.ಟಿ.ಸಿ.ಎಲ್ ಗ್ರಿಡ್ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಕುಮಟಾ ಪಟ್ಟಣ, ಇಂಡಸ್ಟ್ರಿಯಲ್, ಚಿತ್ರಗಿ, ಮಿರ್ಜಾನ್, ಬಾಡ, ವಾಲ್ಗಳ್ಳಿ, ಹೆಗಡೆ, ಕತಗಾಲ, ಮಾಸೂರ, ಧಾರೇಶ್ವರ (Dhareshwar) ಫೀಡರಿನ ಎಲ್ಲಾ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ (power outage) ಆಗಲಿದೆ.
ಇದನ್ನೂ ಓದಿ : rain update/ ಭಟ್ಕಳದ ಬೆಳಕೆಯಲ್ಲಿ ದಾಖಲೆ ಮಳೆ !
ಇದಲ್ಲದೆ ಗೋಕರ್ಣ ೩೩/೧೧ಕೆ.ವಿ ಉಪಕೇಂದ್ರದ ಮಾದನಗೇರಿ, ಗೋಕರ್ಣ (Gokarna), ತದಡಿ (Tadri), ಬಂಕಿಕೋಡ್ಲ, ಬಿಜ್ಜೂರು, ಗಂಗಾವಳಿ, ಓಂ ಬಿಚ್ (Om beach) ಫೀಡರಿನ ಎಲ್ಲಾ ಭಾಗಗಳಲ್ಲಿ ಹಾಗೂ ೩೩/೧೧ ಕೆ.ವಿ ಮರಾಕಲ ಉಪಕೇಂದ್ರದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಕೂಜಳ್ಳಿ, ಉಳ್ಳೂರುಮಠ ಹಾಗೂ ಮೂರೂರು ಫೀಡರಿನ ವ್ಯಾಪ್ತಿಯ ಎಲ್ಲಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ : power shutdown / ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್ ಇರಲ್ಲ