ಭಟ್ಕಳ (Bhatkal) : ಕಣ್ಣು ಕಾಣದ ವೃದ್ಧೆ ನದಿಯಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ (Elderly woman dies) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಮಾವಿನಕುರ್ವಾದ ಬೆಳ್ನಿ ನಿವಾಸಿ ನಾಗಮ್ಮ ಸಣ್ಣಪ್ಪ ಮೊಗೇರ (೮೫) ಮೃತ ದುರ್ದೈವಿ. ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಅವರು ಮಾ. ೧೧ರಂದು ಮಧ್ಯರಾತ್ರಿ ೧೨.೪೫ರ ಸುಮಾರಿಗೆ ಮನೆಯಿಂದ ಎದ್ದು ಹೊರಗೆ ಹೋಗಿದ್ದರು. ಈ ಸಂದರ್ಭ ಮನೆಯ ಪಕ್ಕದಲ್ಲಿರುವ ಶರಾಬಿ ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ (Elderly woman dies) ಎಂದು ದೂರಿನಲ್ಲಿ ತಿಳಿಸಲಾಗಿದೆ. ಮರುದಿನ ಬೆಳಿಗ್ಗೆ ೭ ಗಂಟೆಯ ಸುಮಾರಿಗೆ ಮೃತದೇಹ ಮಾವಿನಕುರ್ವಾ ಬಂದರಿನಲ್ಲಿ ಪತ್ತೆಯಾಗಿದೆ. ಮೃತರ ಮಗ ಮಾದೇವ ಸಣ್ಣಪ್ಪ ಮೊಗೇರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (case filed).
ಇದನ್ನೂ ಓದಿ : Road block/ ಭಟ್ಕಳ ಮಾವಿನಕುರ್ವೆಯಲ್ಲಿ ಸಂಚಾರ ನಿಷೇಧ