ಭಟ್ಕಳ (Bhatkal) : ತಾಲೂಕಿನಾದ್ಯಂತ ಗುರುವಾರ ಬೆಳಿಗ್ಗೆಯಿಂದ ಎಡೆ ಬಿಡದೆ ಸುರಿದ ಧಾರಕಾರ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆ ತನಕ ಒಂದೇ ದಿನಕ್ಕೆ ೨೬೦.೪ ಮಿ.ಮೀ. ಮಳೆಯಾಗಿದೆ (rain update).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ೨ ದಿನಗಳಿಂದ ಭಟ್ಕಳ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಗುರುವಾರ ಮುಂಜಾನೆಯಿಂದ ಸುರಿದ ಮಳೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ, ಸಂಶುದ್ದೀನ್ ವೃತ್ತ ಸೇರಿದಂತೆ ತಾಲ್ಲೂಕಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣ ನೀರಿನಿಂದ ಜಲಾವೃತಗೊಂಡು ನದಿಯಂತಾಗಿತ್ತು. ವ್ಯಾಪಕ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದ್ದರೆ ಹೊಳೆ, ಕೆರೆ, ಬಾವಿ, ನದಿಗಳು ಭರ್ತಿಯಾಗಿ ತುಂಬಿ ತುಳುಕುತ್ತಿರುವುದು ಕಂಡು ಬಂತು.
ಇದನ್ನೂ ಓದಿ : Elderly woman dies/ ಕಣ್ಣು ಕಾಣದೆ ನದಿಯಲ್ಲಿ ಬಿದ್ದು ವೃದ್ಧೆ ದುರ್ಮರಣ
ಐ.ಆರ್.ಬಿ.ಯಿಂದ ಸಂಶುದ್ದೀನ್ ವೃತ್ತ ಬಳಿ ಹಾಗೂ ರಂಗಿನಕಟ್ಟೆಯಲ್ಲಿ ಮಣ್ಣಿನಿಂದ ತುಂಬಿದ್ದ ಗಟಾರವನ್ನು ಸ್ವಚ್ಛಗೊಳಿಸಿ ನೀರು ಸುಗಮವಾಗಿ ಹರಿದುಹೋಗುವಂತೆ ಮಾಡಿದ್ದರು ಕೂಡ ರಾಷ್ಟೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲಿಲ್ಲ. ಹೀಗಾಗಿ ಹೆದ್ದಾರಿ ಜಲಾವೃತ ಗೊಂಡು ವಾಹನಗಳು ನೀರಿನಲ್ಲಿ ಸಾಗುವ ಪರಿಸ್ಥಿತಿ ಉಂಟಾಯಿತು. ರಂಗಿನಕಟ್ಟೆಯಲ್ಲಿ ಹೆದ್ದಾರಿ ಜಲಾವೃತಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಒಂದು ಕಡೆ ಬ್ಯಾರಿಕೇಟ್ ಹಾಕಿ ವಾಹನಗಳು ನಿಧಾನವಾಗಿ ಹೋಗುವಂತೆ ನೋಡಿಕೊಂಡರು.
ಇದನ್ನೂ ಓದಿ : Road block/ ಭಟ್ಕಳ ಮಾವಿನಕುರ್ವೆಯಲ್ಲಿ ಸಂಚಾರ ನಿಷೇಧ
ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಸಾರ್ವಜನಿಕರು ಮನೆಯಿಂದ ಹೊರಬರದೆ ಮನೆಯಲ್ಲೇ ಇದ್ದರು. ಸಾರ್ವಜನಿಕರು ಮನೆಯಿಂದ ಹೊರಬರದ ಕಾರಣ ಮಾರುಕಟ್ಟೆ ಸೇರಿದಂತೆ ಹೋಟೆಲ್ ಉದ್ಯಮಗಳು ಗ್ರಾಹಕರಿಲ್ಲದೆ ಗುರುವಾರ ಬಿಕೋ ಎಂದವು. ಶುಕ್ರವಾರ ಬೆಳ್ಳಿಗೆಯಿಂದ ಮಳೆರಾಯ ಕೊಂಚ ವಿರಾಮ ನೀಡಿದ್ದು. ಸಾರ್ವಜನಿಕರ ಓಡಾಟ ಚುರುಕುಗೊಂಡಿದೆ (rain update).
ಭಟ್ಕಳದಲ್ಲಿ ಮಳೆ ಅವಾಂತರದ ವಿಡಿಯೋಗಳನ್ನು ಭಟ್ಕಳ ಡೈರಿಯ ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Lightning/ ಭಟ್ಕಳದಲ್ಲಿ ಸಿಡಿಲು ಬಡಿದು ದನದ ಕೊಟ್ಟಿಗೆ ಭಸ್ಮ