ಭಟ್ಕಳ: ಕಾರೊಂದು ಡಿಕ್ಕಿ (Car collided) ಹೊಡೆದು ಮೋಟರ್ ಸೈಕಲ್ ಸವಾರ ಗಾಯಗೊಂಡಿರುವ ಬಗ್ಗೆ ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಕಾಯ್ಕಿಣಿ ತೆರ್ನಮಕ್ಕಿಯ ಕಾರ್ಪೆಂಟರ್ ಕೆಲಸ ಮಾಡುವ ಮಂಜುನಾಥ ತಂದೆ ರಾಮಚಂದ್ರ ಆಚಾರಿ(೪೭) ಗಾಯಗೊಂಡ ಮೋಟರ್ ಸೈಕಲ್ ಸವಾರ. ಚೆವರ್ಲೆಟ್ ಕಾರಿನ ಚಾಲಕ ಕಾಯ್ಕಿಣಿ ಬಸ್ತಿ ಹೆರಾಡಿಯ ರವಿ ಮುರ್ಡೇಶ್ವರ ನಾಯ್ಕ ವಿರುದ್ಧ ದೂರು ದಾಖಲಿಸಲಾಗಿದೆ.
Assault/ ಕರಿಕಲ್ ಗ್ರಾಮದಲ್ಲಿ ಗುಂಪಿನಿಂದ ಹಲ್ಲೆ
ಫೆ ೨೨ರಂದು ರಾತ್ರಿ ೯.೧೫ರ ಸುಮಾರಿಗೆ ಮಂಜುನಾಥ ಆಚಾರಿ ತಮ್ಮ ಮೋಟರ್ ಸೈಕಲ್ನಲ್ಲಿ ಅಕ್ಷಯ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ತಮ್ಮ ಮನೆಗೆ ರಸ್ತೆ ಬದಿಯಲ್ಲಿ ಮೊಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಚೆವರ್ಲೆಟ್ ಕಾರು ಡಿಕ್ಕಿ (Car collided) ಹೊಡೆದಿದೆ. ಹೊನ್ನಾವರ ಕಡೆಯಿಂದ ಭಟ್ಕಳದ ಕಡೆಗೆ ಬರುವ ರಸೆ ್ತಯಲ್ಲಿ ಬಂದ ಕಾರು ಮುರುಡೇಶ್ವರದ ತೆರ್ನಮಕ್ಕಿಯ ಮಯೂರ ದಾಬಾದ ಹತ್ತಿರ ಮಯೂರ ದಾಬಾದ ಕಡೆಗೆ ತಿರುಗಿಸಿದಾಗ ಬೈಕಿಗೆ ಡಿಕ್ಕಿ ಹೊಡೆದಿದೆ. ಸವಾರನ ಬಲಕೈಗೆ ಭಾರಿ ಗಾಯ ಹಾಗೂ ಎದೆಗೆ, ಕುತ್ತಿಗೆಗೆ ಒಳ ನೋವು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Clock Tower/ ಭಟ್ಕಳ ವೃತ್ತದ ಗಡಿಯಾರ ಗೋಪುರ ಇನ್ನು ನೆನಪು ಮಾತ್ರ


