ಭಟ್ಕಳ: ಅಂಗನವಾಡಿಯ (Anganwadi) ನಿವೃತ್ತ ಶಿಕ್ಷಕಿಗೆ ದಾಯವಾದಿಗಳು ಧಮಕಿ ಹಾಕಿರುವ ಬಗ್ಗೆ ಮುರ್ಡೇಶ್ವರ (Murudeshwara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೊಡ್ಡಬಲಸೆ, ನೀರಗದ್ದೆಯ ಮಾಸ್ತಮ್ಮ ರಾಮ ನಾಯ್ಕ (೬೮) ಎಂಬವರು ನೀರಗದ್ದೆಯವರ ಮಹಾಲಕ್ಷ್ಮಿ ಮಹಾಬಲೇಶ್ವರ ನಾಯ್ಕ ಮತ್ತವರ ಗಂಡ ಮಹಾಬಲೇಶ್ವರ ನಾಯ್ಕ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಪಿರ್ಯಾದಿಯ ದಾಯವಾದಿಯ ಹೆಣ್ಣು ಮಗಳಾದ ಮಹಾಲಕ್ಷ್ಮಿ ಇವಳಿಗೆ ಮಂಕಿಯ ಮಹಾಬಲೇಶ್ವರ ನಾಯ್ಕ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿದೆ. ಗಂಡನ ಊರಿನಿಂದ ಕಳೆದ ೫-೬ ವರ್ಷಗಳ ಹಿಂದೆ ದೊಡ್ಡಬಲಸೆಯ ನೀರಗದ್ದೆಯಲ್ಲಿ ಅಜ್ಜಿಯ ಮನೆಯವರಿಗೆ ಸಂಬಂಧಪಟ್ಟ ಜಮೀನಿನಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು.

Car collided/ ತೆರ್ನಮಕ್ಕಿಯಲ್ಲಿ ಬೈಕಿಗೆ ಕಾರು ಡಿಕ್ಕಿ

ಕಳೆದ ೬-೭ ತಿಂಗಳಿನ ಹಿಂದೆ ಹವ್ಯಕ ಸಭಾ ಭವನ ಎದುರಿನ ಬಸ್ ತಂಗುದಾಣದ ಮಗ್ಗಲಿನಲ್ಲಿ ಸಣ್ಣದೊಂದು ಅಂಗಡಿಯನ್ನು ಇಟ್ಟುಕೊಂಡಿದ್ದು, ಅದನ್ನು ಗಮನಿಸಿದ ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದರು. ಅದೇ ರೀತಿ ಅದರಲ್ಲಿ ತೆಗೆದ ಬಾವಿಯನ್ನು ಸಹ ಅರಣ್ಯ ಇಲಾಖೆಯವರು ಮುಚ್ಚಿಸಿದ್ದರು. ಇದಕ್ಕೆಲ್ಲ ಪಿರ್ಯಾದಿ ಮಗ ರಾಜೇಶ ಮತ್ತು ದಾಯವಾದಿ ಶಂಕರ ಕಾರಣ ಅಂತಾ ಮಹಾಲಕ್ಷ್ಮಿ ಮತ್ತು ಅವಳ ಗಂಡ ಮಹಾಬಲೇಶ್ವರ ನಾಯ್ಕ ಸೇರಿಕೊಂಡು ಧಮಕಿ ಹಾಕಿದ್ದಾರೆ.

Assault/ ಕರಿಕಲ್ ಗ್ರಾಮದಲ್ಲಿ ಗುಂಪಿನಿಂದ ಹಲ್ಲೆ

ಅಲ್ಲದೇ ಜ ೧೧ರಂದು ಪಿರ್ಯಾದಿ ಮಾಡಿಕೊಟ್ಟಿದ್ದ ಸಂಘದ ಸಾಲವನ್ನು ತುಂಬಲು ಹೇಳಿದ್ದಕ್ಕೆ ತಾನು ತುಂಬುವದಿಲ್ಲ ಎಂದು ಹೇಳಿದ್ದಾರೆ. ಜ ೧೨ರಂದು ಬೆಳಿಗ್ಗೆ ೯:೧೫ ಗಂಟೆ ಸುಮಾರಿಗೆ ಇದನ್ನು ಕೇಳಲು ಹೋದಾಗ, ಅವಾಚ್ಯ ಶಬ್ದಗಳಿಂದ ಮಹಾಲಕ್ಷ್ಮಿ ಬೈದಿರುವುದಾಗಿ ಮುರ್ಡೇಶ್ವರ (Murudeshwara) ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Clock Tower/ ಭಟ್ಕಳ ವೃತ್ತದ ಗಡಿಯಾರ ಗೋಪುರ ಇನ್ನು ನೆನಪು ಮಾತ್ರ