ಭಟ್ಕಳ: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ (ganja) ಸೇವನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ (Bhatkal) ಗ್ರಾಮೀಣ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತಾಲೂಕಿನ ಹೆಬಳೆ ಜಾಮಿಯಾಬಾದ ಹಾಗೂ ವೆಂಕಟಾಪುರದ ಜಾಗಟೆಬೈಲ್ ಮೈದಾನದ ಸಮೀಪ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಸಿಫ್ ಕೆ ಎ (೨೬) ಹೆಬಳೆ ಜಾಮೀಯಾಬಾದ ನಿವಾಸಿ, ಬಿಲಾಲ್ ಅಹ್ಮದ್ (೩೬) ಮದೀನಾ ಕಾಲೋನಿಯ ಉಮ್ಮರ್ ಸ್ಟ್ರೀಟ್ ನಿವಾಸಿ ಹಾಗೂ ಮಹಮ್ಮದ್ ರಸೂಲ್ (೩೪) ಜಾಲಿ ತಗ್ಗರಗೋಡು ಬಂಧಿತರು. ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಇವರನ್ನು ಪೊಲೀಸರು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಪತ್ತೆಯಾಗಿದೆ.

Huge drama/ ಜಾಲಿಯಲ್ಲಿ ಗೋ ಕಳ್ಳರ ಭಾರಿ ಹೈಡ್ರಾಮಾ

ವೈದ್ಯಕೀಯ ಪರೀಕ್ಷೆಯಲ್ಲಿಯೂ ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ  ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಹಾಗೂ ಪಿಎಸ್‌ಐ ಭರಮಪ್ಪ ಬೆಳಗಲಿ ಸರ್ಕಾರದ ಪರವಾಗಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ (case filed) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Rathotsava/ ಚಿತ್ರಾಪುರದಲ್ಲಿ ರಥೋತ್ಸವ ಸಂಪನ್ನ