ಭಟ್ಕಳ: ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಮೊದಲ ದಿನವಾದ ರವಿವಾರ ಉಮೇಶ ಮುಂಡಳ್ಳಿ ಅವರ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಭಾವಗಾನ (Bhavagana) ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಿಲ್ಲೆಯ ಜನಪ್ರಿಯ ಸುಗಮ ಸಂಗೀತ ಗಾಯಕ, ಸ್ವರ ಸಂಯೋಜಕ ಉಮೇಶ ಮುಂಡಳ್ಳಿ ಸಾರಥ್ಯದಲ್ಲಿ ನಡೆದ ಭಾವಗಾನ (Bhavagana) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಕ್ತಿಗೀತೆ, ಭಾವಗೀತೆ, ಜನಪದ, ತತ್ವಪದ, ದೇಶಭಕ್ತಿ ಗೀತೆ, ವಚನಗಳು ಹೀಗೆ ಎಲ್ಲಾ ಪ್ರಕಾರದ ಹಾಡುಗಳನ್ನು ಒಳಗೊಂಡ ಭಾವಗಾನ ಪ್ರಸ್ತುತಿ ಸುಂದರವಾಗಿ ಮೂಡಿಬಂದಿತು.
Case filed/ ಗಾಂಜಾ ಸೇವನೆ: ಮೂವರ ಬಂಧನ
ಸಹ ಗಾಯಕರಾಗಿ ಹೊನ್ನಾವರದ ಮಧುರಾ ನಾಯ್ಕ ಅಳ್ಳಂಕಿ, ಉತ್ಥಾನ ಮುಂಡಳ್ಳಿ ಇದ್ದರು. ಕೀಬೋರ್ಡ್ ನಲ್ಲಿ ವಿಘ್ನೇಶ ಗೌಡ ಹೊನ್ನಾವರ, ರಿದಂ ಪ್ಯಾಡ್ ನಲ್ಲಿ ಉಮೇಶ ಮೇಸ್ತ, ತಬಲದಲ್ಲಿ ಸುಬ್ರಮಣ್ಯ ಆಚಾರ್ಯ ಗುಣವಂತಿ ಸಹಕರಿಸಿದ್ದರು.
Huge drama/ ಜಾಲಿಯಲ್ಲಿ ಗೋ ಕಳ್ಳರ ಭಾರಿ ಹೈಡ್ರಾಮಾ
ಕಾರ್ಯಕ್ರಮದ ನಂತರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್ ಬಿ ಬೊಮ್ಮಾಯಿ, ಸದಸ್ಯರು ಹಾಗೂ ಭಾವಗಾನದ ಪ್ರಾಯೋಜಕ ಸುರೇಶ ಮೊಗೇರ ಹಾವಳಿಕಂಠ ಉಮೇಶ ಮುಂಡಳ್ಳಿ ಅವರನ್ನು ಗೌರವಿಸಿ, ಸನ್ಮಾನಿಸಿದರು.
Durgaparameshwari/ ೬೦೦ ವರ್ಷಗಳ ಇತಿಹಾಸದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ



