ಭಟ್ಕಳ ಡೈರಿ ವರದಿ
ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ ೬೬ರ ಮಂಕಿ ಮಾವಿನಕಟ್ಟಾ ಸರ್ಕಲ್ ಸಮೀಪ ಬೈಕ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ನವೆಂಬರ್ ೨೫ರಂದು ಮಧ್ಯಾಹ್ನ ನಡೆದಿದೆ.
ಸುಮಾರು ೩.೧೫ರ ವೇಳೆಗೆ ಮಾವಿನಕಟ್ಟಾ ಸರ್ಕಲ್ನಿಂದ ಮಂಕಿ ಕಡೆಗೆ ಸಾಗುತ್ತಿದ್ದ ಮುರುಡೇಶ್ವರದ ಸೂರಜ ಕೃಷ್ಣ ದೇವಾಡಿಗ ಎಂಬವರು ಮೋಟಾರ್ ಸೈಕಲ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ದತ್ತ ಬಂಗಾರಿ ನಾಯ್ಕ ಅವರ ಸ್ಕೂಟಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಿಂದ ದತ್ತ ಬಂಗಾರಿ ನಾಯ್ಕ ಅವರ ಬಲಭಾಗದ ಹಣೆ ಹಾಗೂ ಬಲಗಣ್ಣಿನ ಸಮೀಪ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ಅಲ್ಲದೆ, ಬಲಗೈ ಮತ್ತು ಬಲಕಾಲಿಗೂ ತರಚಿದ ಗಾಯಗಳಾಗಿವೆ. ಈ ಕುರಿತು ಮಂಕಿ ನಿವಾಸಿ ಕಾರ್ತಿಕ ನಾಗಪ್ಪ ನಾಯ್ಕ (೨೭) ಅವರು ಮಂಕಿ ಪೊಲೀಸ್ ಠಾಣೆಗೆ ಗಣಕೀಕೃತ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ, ಇಲ್ಲವಾದರೆ ಚುನಾವಣೆಯಲ್ಲಿ ಉತ್ತರ: ಶಿವಾನಿ ಭಟ್ಕಳ
ಗೋಕರ್ಣದಲ್ಲಿ ಡಿ. ೧ರಂದು ಶ್ರೀ ಕಾಲಭೈರವ ಜಯಂತಿ ಹಾಗೂ ಕಾರ್ತಿಕ ದೀಪೋತ್ಸವ



