ಭಟ್ಕಳ ಡೈರಿ ವರದಿ

ಗೋಕರ್ಣ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಗೋಕರ್ಣದ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಡಿಸೆಂಬರ್ ೧ರಂದು ಶ್ರೀ ಕಾಲಭೈರವ ದೇವರ ಜಯಂತಿ ಹಾಗೂ ಕಾರ್ತಿಕ ದೀಪೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಶಾಲಿವಾಹನ ಶಕ ೧೯೪೮ನೇ ಪಂಚಾಂಗ ಸಂವತ್ಸರದ ಕಾರ್ತಿಕ ಮಾಸ ಕೃಷ್ಣ ಪಕ್ಷ ಅಷ್ಟಮಿಯಂದು, ಅಂದರೆ ಡಿಸೆಂಬರ್ ೧, ಮಂಗಳವಾರದಂದು ಈ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕಾಲಭೈರವ ಜಯಂತಿ ಹಾಗೂ ಕಾರ್ತಿಕ ದೀಪೋತ್ಸವದ ಅಂಗವಾಗಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೯ ಗಂಟೆಗೆ ಸಾಮೂಹಿಕ ಸತ್ಯನಾರಾಯಣ ವ್ರತ, ಮಧ್ಯಾಹ್ನ ೧ ಗಂಟೆಗೆ ಅಲಂಕಾರ ಮಹಾಪೂಜೆ, ಮಧ್ಯಾಹ್ನ ೧.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ೫ ಗಂಟೆಯಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ ೬ ಗಂಟೆಗೆ ದೀಪೋತ್ಸವ ಜರುಗಲಿದೆ. ಭಜನಾ ಕಾರ್ಯಕ್ರಮದಲ್ಲಿ ಶ್ರೀ ಅಳವಿ ಆಂಜನೇಯ ಭಜನಾ ಮಂಡಳಿ, ತದಡಿ-ಬೆಲೇಕಾನ್ ಭಾಗವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಕಾಲಭೈರವ ದೇವರಿಗೆ ಪ್ರಿಯವಾದ ವಡೆಹಾರ ಸೇವೆ ನೀಡಲು ಇಚ್ಛಿಸುವವರು ನವೆಂಬರ್ ೨೮ರೊಳಗೆ ದೇವಸ್ಥಾನದ ಪ್ರಕಟಣೆಯಲ್ಲಿ ನೀಡಿರುವ ಸಂಪರ್ಕ ಸಂಖ್ಯೆ ೯೯೪೫೯೬೫೨೮೩ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ಕಾಲಭೈರವ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವತಿಯಿಂದ ವಿನಂತಿಸಲಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಗ್ರಾಮೀಣ ದುಡಿಯುವ ಜನರಿಗೆ ವಿಬಿಜಿ ರಾಮ್ ಜಿ ಯೋಜನೆ ವರದಾನ: ಉಮೇಶ ಮುಂಡಳ್ಳಿ

ಭಟ್ಕಳ ಕಂದಾಯ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಮಂಜುನಾಥ ನಾಯ್ಕಗೆ ಅಧ್ಯಕ್ಷ ಪಟ್ಟ, ಸುನೀಲ ಕೋಚರಿಕರ್‌ಗೆ ಕಾರ್ಯದರ್ಶಿ ಜವಾಬ್ದಾರಿ