ಕಾರವಾರ : ಗುಡ್ಡಕುಸಿತ ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ ಜುಲೈ ೧೬ರಿಂದ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ. ಈ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದರಿಂದ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ(police department) ಸೂಚನೆ (Attention) ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜಿಲ್ಲಾಧಿಕಾರಿಯವರು ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳ್ಳುವವರೆಗೆ ಗುಡ್ಡಕುಸಿತ (land slide) ಸ್ಥದಲ್ಲಿ ನಿಷೇಧಾಜ್ಞೆಯನ್ನು ಹೊರಡಿಸಿದ್ದು, ಈ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಭೂ ವಿಜ್ಞಾನ ತಜ್ಞರು ಗುಡ್ಡ ಕುಸಿತಗೊಂಡ ಸ್ಥಳದಲ್ಲಿ ಭಾರಿ ಮಳೆ (heavy rain) ಆಗುತ್ತಿರುವುದರಿಂದ ಮತ್ತೆ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸಾಲ ತುಂಬಲು ಹೇಳಿದ್ದಕ್ಕೆ ಮಗನಿಂದಲೇ ತಂದೆ ಮೇಲೆ ಹಲ್ಲೆ

ಈ ಸ್ಥಳದಲ್ಲಿ ವಾಹನಗಳು ಮತ್ತು ಸಾರ್ವಜನಿಕರ ಓಡಾಟವನ್ನು ಈಗಾಗಲೇ ಸೂಚಿಸಿರುವ ಬದಲಿ ಮಾರ್ಗ (alternate road)ಗಳಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಒಂದು ವೇಳೆ ಈ ಮಾರ್ಗದಿಂದ ವಾಹನಗಳು ಸಂಚರಿಸಿದರೆ ಮಣ್ಣು ತೆರವು ಕಾರ್ಯಾಚರಣೆಗೆ ಅಡಚಣೆ ಉಂಟಾಗಿ ನಾಪತ್ತೆಯಾದವರ ಪತ್ತೆ ಕಾರ್ಯ ವಿಳಂಬವಾಗುವ ಸಾಧ್ಯತೆ ಇರುತ್ತದೆ ಎಂದು ಪೊಲೀಸ್ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಶಿಕ್ಷಕರಿಗೊಂದು ಶುಭ ಸುದ್ದಿ

ಶಿರೂರು ಗುಡ್ಡ ಕುಸಿತದ ಮಣ್ಣಿನ ತೆರವು ಹಾಗೂ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆಗೆ ಜಿಲ್ಲಾಡಳಿತ, NDRF, SDRF, ನೆವೆಲ್ ಡೈವಿಂಗ್ ಸ್ವಾಡ್. ಭಾರತೀಯ ಸೇನೆ, ಬೆಂಗಳೂರು ಹಾಗೂ ಹುಬ್ಬಳ್ಳಿ- ಧಾರವಾಡದಿಂದ ಡೀಫ್ ಸರ್ಚ್ ಮೆಟಲ್ ಡಿಟೆಕ್ಟರ್ ಮತ್ತು ನುರಿತ ಶೋಧನಾ ತಂಡಗಳು ಕಾರ್ಯಾಚರಿಸುತ್ತಿವೆ. ಇವರಿಗೆ ಜಿಲ್ಲೆಯ ಎ.ಎಸ್.ಸಿ ತಂಡ, ಶ್ವಾನದಳ ಹಾಗೂ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸಹಕರಿಸುತ್ತಿದ್ದಾರೆ. ಗುಡ್ಡ ಕುಸಿತದಿಂದ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯಲು ಹಿಟಾಚಿ. ವೀಲ್ ಲೋಡರ್, ಜೆ.ಸಿ.ಬಿ ಮತ್ತು ಡಂಪರ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ ಬದಲಿ ಮಾರ್ಗ ಬಳಸಲು ಸೂಚನೆ(Attention) ನೀಡಲಾಗಿದೆ.

ಇದನ್ನೂ ಓದಿ :  ಭಟ್ಕಳದಿಂದ ಮುಂಬೈಗೆ ತೆರಳಿ ಕಟ್ಟಿದ ಸಂಸ್ಥೆಗೆ ನೂರು ವರ್ಷ

ಬದಲಿ ಮಾರ್ಗ ಯಾವುದು?
ಟ್ಯಾಕ್ಸಿ ಮತ್ತು ಲಾರಿ ಚಾಲಕ ಮತ್ತು ಮಾಲಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗಬಬಳಸಬಹುದಾಗಿದೆ. ಯಲ್ಲಾಪುರ ಕಡೆಯಿಂದ ಕುಮಟಾ ಕಡೆಗೆ ಹಾಗೂ ಕುಮಟಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುವ ವಾಹನಗಳನ್ನು ಹೊಸಕಂಬಿ- ಮಾದನಗೇರಿ ರಸ್ತೆ ಮುಖಾಂತರ ಸಂಚರಿಸಲು ಪೊಲೀಸ್ ಇಲಾಖೆ ಸೂಚನೆ (Attention) ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ :  ಜನನಿಬಿಡ ಸ್ಥಳದಲ್ಲಿ ಅನಾಥ ಕಾರು