ಕಾರವಾರ (Karwar) : ರಾಷ್ಟ್ರೀಯ ಹೆದ್ದಾರಿಯ (National Highway) ಕೋಡಿಬಾಗದ ಕಾಳಿ ನದಿಯ (Kali River) ನೂತನ ಸೇತುವೆಯ ಬದಿಯಲ್ಲಿರುವ ತಡೆಗೋಡೆಯ (Barrier) ಎತ್ತರವನ್ನು ಏರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಒತ್ತಾಯಿಸಿದ್ದಾರೆ. ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ವಾಟ್ಸಾಪ್ ಹಾಗೂ ಇಮೇಲ್ ಮೂಲಕ ಮನವಿ ಕಳುಹಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರಾಷ್ಟ್ರೀಯ ಹೆದ್ದಾರಿ ೬೬ರ ಕಾರವಾರ ಗೋವಾ ಮಾರ್ಗದ ಕಾರವಾರ ನಗರದ  ಹೊರವಲಯದಲ್ಲಿರುವ ಕಾಳಿ ನದಿಯ ಹಳೆಯ ಸೇತುವೆ ಕೆಲವು ದಿನಗಳ ಹಿಂದೆ ಮುರಿದು ಬಿದ್ದ ಕಾರಣ ಪಕ್ಕದ ನೂತನ ಸೇತುವೆ ಮೇಲಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನು ಬಿಟ್ಟರೆ ಬೇರೇನೂ ಸದ್ಯ ಮಾಡಲು ಸಾಧ್ಯವಿಲ್ಲ. ಆದರೆ   ಪಾದಚಾರಿಗಳಿಗೆ, ಸೈಕಲ್-ಬೈಕ್ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :  ಪತ್ರಕರ್ತರ ಮೇಲೆ ಅನುಚಿತ ವರ್ತನೆಗೆ ಖಂಡನೆ

ನಾಲ್ಕು ಚಕ್ರ ವಾಹನ ಚಾಲಕರು ವೇಗವಾಗಿ  ಸೇತುವೆಯ ಮೇಲಿಂದ ತಮ್ಮ ವಾಹನಗಳನ್ನು ಓಡಿಸುತ್ತಿದ್ದಾರೆ.  ಇದರಿಂದಾಗಿ ದ್ವಿಚಕ್ರ ವಾಹನ ಓಡಿಸುವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೆಯಲ್ಲದೇ ಸೇತುವೆ ದಾಟುವ ಪಾದಚಾರಿಗಳು,  ಶಾಲೆಗೆ ತೆರಳುವ ಮಕ್ಕಳು ಕೂಡ ತಂತಿ ಮೇಲಿನ ದಾರಿ ಎಂಬಂತೆ ಪ್ರಯಾಣ ಮಾಡುತ್ತಿದ್ದಾರೆ. ಈ ಸೇತುವೆಯ ಎರಡೂ ಕಡೆಯಿಂದ ಓಡಾಡುವ ಎಲ್ಲಾ ವಾಹನಗಳು ವೇಗದ ಮಿತಿ ಕಡಿಮೆ ಮಾಡದೆ ತುಂಬಾ ವೇಗವಾಗಿ ಚಲಿಸುತ್ತಿದ್ದಾರೆ. ಇದರಿಂದ  ತೀವ್ರ ಇಕ್ಕಟ್ಟಾದ ಕಾಳಿ ಸೇತುವೆಯ ಮೇಲೆ  ಸೈಕಲ್‌, ಬೈಕ್‌ ತಡೆಗೋಡೆಗೆ (Barrier) ಬಿದ್ದರೆ  ಕಾಳಿ ನದಿಯ ಕೆಳಗಿನ ಆಳ ಕಾಣುತ್ತದೆ. ಭಾರಿ ಗಾಳಿ-ಮಳೆ ಸುರಿಯುತ್ತಿರುವಾಗ  ಹೆದರಿಕೆ ಆಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ ಬಿ ಕಂಪನಿಯವರು ಕೂಡಾ ನೂತನ ಸೇತುವೆಯ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ರೈಲ್ವೆ ನಿಲ್ದಾಣದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್‌ ನಿರ್ಮಾಣಕ್ಕೆ ಮನವಿ

ಈ ಸೇತುವೆಯ ತಡೆಗೋಡೆ ಚಿಕ್ಕದಾಗಿದ್ದು,  ಈ ಸೇತುವೆ ಒನ್ ವೇವ್ ಗೆ ಮಾತ್ರ ಐ ಆರ್ ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಿದಂತಿದೆ. ಈ ಸೇತುವೆಯ ತಡೆಗೋಡೆ ಮಾನವನ ಸೊಂಟದ ಮಟ್ಟದಲ್ಲಿ ಇದೆ. ಆದ್ದರಿಂದ ಈ ನೂತನ ಸೇತುವೆ ತಡೆಗೋಡೆ ಸ್ವಲ್ಪ ಎತ್ತರ ಮಾಡಬೇಕಾಗಿದೆ. ಸದ್ಯದ ಮಟ್ಟಿಗೆ ತಡೆಗೋಡೆ ಮೇಲೆ ಕಬ್ಬಿಣದ ದೊಡ್ಡ ಪೈಪ್ ಗಳಿಂದ ಎತ್ತರಕ್ಕೆ ಮಾಡಲು ಕ್ರಮಕೈಗೊಳ್ಳಬೇಕು. ಇದರಿಂದ ಮತ್ತೊಂದು ದಿನ ಆಗುವ ಅಪಾಯ ತಪ್ಪಿಸಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದನ್ನೂ ಓದಿ : ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆಗೆ ವೀರಾಗ್ರಣಿ ಪ್ರಶಸ್ತಿ