ಭಟ್ಕಳ: ನಗರದ ಹರಿಜನಕೇರಿಯ ಅಂಜುಮಾನ್ ಕಾಲೇಜ್ ರೋಡ್‌ನಲ್ಲಿರುವ ಶ್ರೀ ಗಂಜಿಮಾರಿಯಮ್ಮ ಸಪರಿವಾರ ದೇವಸ್ಥಾನದಲ್ಲಿ ಫೆಬ್ರವರಿ ೨೦ರಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ಉತ್ಸವವು ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು (grand procession).

ಶೋಭಾಯಾತ್ರೆಯ ವಿಡಿಯೋವನ್ನು ಯೂಟ್ಯೂಬ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೇವರ ಬೆಳ್ಳಿ ಕವಚ ಮರವಣಿಗೆ (grand procession) ಶ್ರೀ ನಾಗಯಕ್ಷೆ ದೇವಸ್ಥಾನದಿಂದ ಆರಂಭವಾಗಿ ಹಳೆ ಬಸ್ ನಿಲ್ದಾಣ, ಸಂಶುದ್ದೀನ್ ಸರ್ಕಲ್ ಹಾಗೂ ತಾಲೂಕು ಆಡಳಿತ ಸೌಧ ಮಾರ್ಗವಾಗಿ ಗಂಜಿಮಾರಿಯಮ್ಮ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋಗಳು, ಮಹಿಳೆಯರ ಭಜನೆ ನೃತ್ಯ, ಚಂಡೆ ವಾದ್ಯಗಳ ಘೋಷ ಹಾಗೂ ನೂರಾರು ಭಕ್ತರ ಉಪಸ್ಥಿತಿ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.

women rescued/ ಗೆಸ್ಟ್ ಹೌಸ್‌ನಲ್ಲಿ ವೇಶ್ಯಾವಾಟಿಕೆ: ಒಬ್ಬ ಸೆರೆ; ಮೂವರು ವಿಠಪುರುಷರು ವಶಕ್ಕೆ, ಇಬ್ಬರು ಮಹಿಳೆಯರ ರಕ್ಷಣೆ 

ಫೆಬ್ರುವರಿ ೨೧ರಂದು ಬೆಳಿಗ್ಗೆ ಸ್ವಸ್ತಿ ವಾಚನೆ, ೨೫ ಕಲಶ ಅಧಿವಾಸ ಹೋಮ, ಅಭಿಷೇಕ, ಲಲಿತಾ ಸಹಸ್ರನಾಮಾರ್ಚನೆ, ಮಹಾಪೂಜೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಮೂರ್ತಿ ಆದಿಕರ್ನಾಟಕ ತಿಳಿಸಿದ್ದಾರೆ.

Makkala Santhe/ ಮಕ್ಕಳ ಸಂತೆಯಲ್ಲಿ ತರಕಾರಿ, ಒಣಮೀನು ಭರ್ಜರಿ ಮಾರಾಟ