ಭಟ್ಕಳ(Bhatkal) : ಬಿಜೆಪಿ (BJP) ಯುವ ಮೋರ್ಚಾದಿಂದ (Yuva Morcha) ಭಾಜಪ ಸದಸ್ಯತ್ವ ಅಭಿಯಾನವನ್ನು (Membership campaign) ಮುರುಡೇಶ್ವರದ (Murudeshwar) ಆರ್.ಎನ್.ಎಸ್. ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರ್ಡೇಶ್ವರದ (Murudeshwar) ಆರ್.ಎನ್.ಎಸ್. (RNS) ಪದವಿ ಕಾಲೇಜು ಮತ್ತು ಆರ್.ಎನ್.ಎಸ್. ಪಾಲಿಟೆಕ್ನಿಕ್ ಕಾಲೇಜು ಎದುರು ವಿದ್ಯಾರ್ಥಿಗಳಿಗೆ ಬಿಜೆಪಿ ಸದಸ್ಯತ್ವ ಪಡೆಯುವಂತೆ ಮನವಿ ಮಾಡಿ, ಸದಸ್ಯತ್ವ ಮಾಡಿಸಿಕೊಂಡರು.
ಇದನ್ನೂ ಓದಿ : ಎಡಿಜಿಪಿ ಚಂದ್ರಶೇಖರ ಅಮಾನತಿಗೆ ಜೆಡಿಎಸ್ ಆಗ್ರಹ
ಸದಸ್ಯತ್ವ ಅಭಿಯಾನದಲ್ಲಿ (Membership campaign) ಮಾಜಿ ಶಾಸಕ ಸುನೀಲ ನಾಯ್ಕ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಭಟ್ಕಳ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ, ಸುಬ್ರಾಯ ದೇವಾಡಿಗ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನಾಯ್ಕ, ಜಿಲ್ಲಾ ಖಜಾಂಚಿ ಕಿರಣ ಕೃಷ್ಣ ಹೆಗಡೆ, ಮಂಡಲ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಮಂಡಲ ಓಬಿಸಿ ಮೋರ್ಚಾ ಅದ್ಯಕ್ಷ ಉಮೇಶ ನಾಯ್ಕ ಹೆರಾಡಿ, ಯುವಮೋರ್ಚಾ ಮಂಡಲದ ಅಧ್ಯಕ್ಷ ಸುನೀಲ ಕಾಮತ, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ನಾಯ್ಕ, ಮಣಿ ನಾಯ್ಕ, ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯಾ ನಾಯ್ಕ, ಯುವ ಮೋರ್ಚಾದ ಮಂಡಲ ಸದಸ್ಯತ್ವ ಅಭಿಯಾನದ ಸಂಚಾಲಕ ವಿನಾಯಕ ನಾಯ್ಕ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಹೊಳೆಯಲ್ಲಿ ಬಿದ್ದು ಕಾಣೆಯಾಗಿದ್ದ ಕೃಷಿಕನ ಮೃತದೇಹ ಪತ್ತೆ