ಭಟ್ಕಳ ಡೈರಿ ವರದಿ
ಭಟ್ಕಳ: ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳದ (Bhatkal) ನಿನಾದ ಕಲ್ಚರಲ್ ಅಕಾಡೆಮಿಯನ್ನು ಉತ್ತರ ಕನ್ನಡ (Uttara Kannada) ಜಿಲ್ಲಾ ಮಟ್ಟದ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ (award). ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು, ಬೆಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು (award) ಸೆಪ್ಟೆಂಬರ್ ೬ರಂದು ಯಲ್ಲಾಪುರದ (Yellapur) ಅಡಿಕೆ ಭವನದಲ್ಲಿ ನಡೆಯಲಿರುವ ‘ಸಾಂಸ್ಕೃತಿಕ ವೈಭವ, ಉತ್ತಮ ಸೇವಾ ಸಂಸ್ಥೆ ಹಾಗೂ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮತ್ತು ಪದಗ್ರಹಣ ಸಮಾರಂಭ’ದಲ್ಲಿ ಪ್ರದಾನ ಮಾಡಲಾಗುವುದು.
Power disruption/ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೆ ೨, ೩ರಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಗೊತ್ತಾ?
ಗಾಯಕ, ಕವಿ ಹಾಗೂ ಸಂಘಟಕರಾದ ಉಮೇಶ ಮುಂಡಳ್ಳಿ ಹಾಗೂ ನಿನಾದ ಸಂಸ್ಥೆಯ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಅವರ ನೇತೃತ್ವದಲ್ಲಿ ಸ್ವಂತ ಖರ್ಚಿನಲ್ಲಿ ಮುನ್ನಡೆಯುತ್ತಿರುವ ನಿನಾದ ಕಲ್ಚರಲ್ ಅಕಾಡೆಮಿ ಹಲವು ವರ್ಷಗಳಿಂದ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಜಾಗೃತಿ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
MP Kageri/ ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಕಾಗೇರಿ
ಸಂಸ್ಥೆಯ ದಶಮಾನೋತ್ಸವದ ಸಂಭ್ರಮದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿಗೆ ಆಯ್ಕೆಯಾಗಿರುವುದು ಭಟ್ಕಳದ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಂಸ್ಥೆಯ ಸಾಂಸ್ಕೃತಿಕ ಪಯಣಕ್ಕೆ ದೊರೆತಿರುವ ಈ ಗೌರವವು ನಿನಾದದೊಂದಿಗೆ ನಿರಂತರವಾಗಿ ಕೈಜೋಡಿಸಿರುವ ಕಲಾವಿದರು, ಸಾಹಿತಿಗಳು, ಗಾಯಕರು, ಸಂಘಟಕರು ಹಾಗೂ ಅಭಿಮಾನಿಗಳಿಗೂ ಸಲ್ಲುವ ಗೌರವವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Aadhaar centre/ ಉತ್ತರ ಕನ್ನಡ ಮಧ್ಯಭಾಗದಲ್ಲಿ ಸುಸಜ್ಜಿತ ಆಧಾರ್ ಕಚೇರಿ ಸ್ಥಾಪನೆಗೆ ಆಗ್ರಹ
ಸೆಪ್ಟೆಂಬರ್ ೬ರ ಭಾನುವಾರ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷಕುಮಾರ ಪಾಟೀಲ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆನರಾ ವೃತ್ತ, ಶಿರಸಿಯ (Sirsi) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ ಹಿರಾಲಾಲ್, ಶಿರಸಿ ಉಪವಿಭಾಗಾಧಿಕಾರಿ ಚೇತನಕುಮಾರ್ ಆರ್ ಜಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ (DDPI) ಡಿ ಆರ್ ನಾಯ್ಕ, ಡಿವೈಎಸ್ಪಿ (DySP) ಗೀತಾ ಪಾಟೀಲ, ಯಲ್ಲಾಪುರ ತಹಶೀಲ್ದಾರ (Tahsildar) ಮಧುಸೂಧನ ಕುಲಕರ್ಣಿ, ಶಿರಸಿ ತಹಶೀಲ್ದಾರ ಪುಟ್ಟರಾಜು ಗೌಡ, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ವಾಸರೆ, ಶಿರಸಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಿರಣ ನಾಯ್ಕ, ಜಿಲ್ಲಾ ಕಾರ್ಯಾಧ್ಯಕ್ಷೆ ಸಂಧ್ಯಾ ನಾಯ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಬೆಂಗಳೂರಿಗರ ನೆರವು
ನಿನಾದ ಕಲ್ಚರಲ್ ಅಕಾಡೆಮಿಗೆ ದೊರೆತಿರುವ ಈ ಜಿಲ್ಲಾ ಮಟ್ಟದ ಗೌರವವು ಭಟ್ಕಳದ ಸಾಹಿತ್ಯ–ಸಂಗೀತ–ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆಗೆ ಸಂದಿರುವ ಮಹತ್ವದ ಮಾನ್ಯತೆಯಾಗಿದ್ದು, ಸಂಸ್ಥೆಯ ದಶಮಾನೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.
Taxi Drivers and Owners/ ಭಟ್ಕಳ ಟ್ಯಾಕ್ಸಿ ಚಾಲಕ–ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
