ಭಟ್ಕಳ : ಡಿ.೩೧ರಂದು ಭಟ್ಕಳ (Bhatkal) ತಾಲೂಕಿನ ಅಳಿವೆಕೋಡಿಯಲ್ಲಿ ನಡೆಯಲಿರುವ ಭಟ್ಕಳ ತಾಲೂಕ ೧೧ನೇ ಕನ್ನಡ (Kannada) ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ನಾರಾಯಣ ಯಾಜಿ ಶಿರಾಲಿ ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಾರಾಯಣ ಯಾಜಿಯವರು ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದಿದ್ದರು. ಮಂಗಳೂರಿನ (Mangaluru) ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ, ಧಾರವಾಡದ (Dharwad) ಕರ್ನಾಟಕ ವಿ.ವಿ.ಯಿಂದ (Karnataka University) ರಾಜಕೀಯ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ, ಉಡುಪಿಯ (Udupi) ಲಾ ಕಾಲೇಜಿನಿಂದ ಕಾನೂನು ಪದವಿ,  ಶಿವಮೊಗ್ಗದ (Shivamogga) ಕುವೆಂಪು ವಿ.ವಿ.ಯಿಂದ (Shivamogga University) ಸ್ನಾತಕೋತ್ತರ ಕಾನೂನು ಪದವಿ ಪಡೆದಿದ್ದಾರೆ.

ಇದನ್ನೂ ಓದಿ :   ಡಿ. ೩೧ರಂದು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ

ಶಿರಾಲಿಯ ಗೊಂಡರು ಎಂಬ ಜನಾಂಗಿಯ ಅಧ್ಯಯನ ಕೃತಿ, ಸಹಕಾರ ಕವನ ಸಂಕಲನ, ಶತಕದ ಸಂಭ್ರಮದಲ್ಲಿ ಭಾರತದ ಸಹಕಾರ ಕ್ಷೇತ್ರ ಮತ್ತು ನಾನೇಕೆ ಬರೆಯುತ್ತೇನೆ ನಿವೃತ್ತಿಯ ನಂತರ ಎಂಬ ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಚಿಂತನಗಳು ಭದ್ರಾವತಿ (Bhadravati) ಮತ್ತು ಕಾರವಾರ (Karwar) ಆಕಾಶವಾಣಿಯಿಂದ ಬಿತ್ತರಗೊಂಡಿವೆ. ಇವರ ಸಣ್ಣಕತೆ, ಲೇಖನಗಳು, ಕವನಗಳು ನವಭಾರತ, ಉದಯವಾಣಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಕರ್ಮವೀರ ಮುಂತಾದ ಕನ್ನಡ (Kannada) ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ : Tulsi Gowda/ ತುಳಸಿ ಅಜ್ಜಿಯ ಅದ್ಬುತ ಪಯಣ