ಭಟ್ಕಳ: ಈ ವರ್ಷದಿಂದ ಮಾರಿ ಜಾತ್ರೆಯಲ್ಲಿ (Mari jatra) ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಯ ಬದಲಿಗೆ ಕುಂಕುಮ ಪ್ರಸಾದವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ವಿತರಿಸಲಾಗುತ್ತದೆ. ವಿಸರ್ಜನೆ ಬಳಿಕ ನಡೆಯುವ ಧಾರ್ಮಿಕ ವಿಧಿ-ವಿಧಾನಗಳ ವೇಳೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಪಾದ ಕಂಚುಗಾರ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶನಿವಾರ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ತಾಲೂಕಿನ ಪ್ರಸಿದ್ಧ ಮಾರಿಜಾತ್ರೆಯು (Mari jatra) ಆಗಸ್ಟ್ ೫, ೬ರಂದು ಭಕ್ತಿಭಾವದಿಂದ ನಡೆಯಲಿದ್ದು, ಜಾತ್ರೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ” ಎಂದರು.

rowdy activities/ ರೌಡಿ ಚಟುವಟಿಕೆ ನಿರತ ವ್ಯಕ್ತಿಗೆ ಜಿಲ್ಲೆಯಿಂದಲೇ ೬ ತಿಂಗಳು ಗಡಿಪಾರು

“ಆಗಸ್ಟ್ ೪ರಂದು ಮಣ್ಣುಳಿ ಆಚಾರ್ಯರ ಮನೆತನದಲ್ಲಿ ಸುವಾಸಿನಿ ಪೂಜೆ ನಡೆಯಲಿದ್ದು, ಆಗಸ್ಟ್ ೫ರಂದು ಮೂರ್ತಿಯನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ತವರುಮನೆಯಿಂದ ರಘುನಾಥ ದೇವಸ್ಥಾನ, ಬಸ್ತಿ ರಸ್ತೆ ಹಾಗೂ ರಥಬೀದಿ ಮಾರ್ಗವಾಗಿ ಭಕ್ತಿಪೂರ್ವಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗುತ್ತದೆ. ಬೆಳಿಗ್ಗೆ ೫.೩೦ ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಜೈನ್ ಸಮುದಾಯದ ಅರ್ಚಕರು ಪ್ರಥಮ ಪೂಜೆ ನೆರವೇರಿಸಲಿದ್ದಾರೆ” ಎಂದರು.

Mari jatra/ ಸಾಂಪ್ರದಾಯಿಕ ವೈಭವದ ಸಂಕೇತ: ಭಟ್ಕಳದ ಮಾರಿ ಜಾತ್ರೆ

“ಆಗಸ್ಟ್ ೬ರಂದು ಸಂಜೆ ೪.೩೦ ಗಂಟೆಗೆ ಮಹಾ ಪ್ರಾರ್ಥನೆ ಮತ್ತು ವಿಸರ್ಜನಾ ಪೂಜೆ ನಡೆಯಲಿದೆ. ನಂತರ ಮುಸ್ಬಾ ಕ್ರಾಸ್, ಹಳೆ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ ಹಾಗೂ ಜಾಲಿ ಕೋಡಿ ಮಾರ್ಗವಾಗಿ ಸುಮಾರು ೭ ಕಿ ಮೀ ಉದ್ದದ ಮೆರವಣಿಗೆ ಸಮುದ್ರ ತೀರ ತಲುಪಲಿದ್ದು, ಸುಮಾರು ೨೫ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ” ಎಂದು ಹೇಳಿದರು.

Mari jatra/ ಮಾರಿಯಮ್ಮನ ಬಿಂಬ ಪೂರ್ಣ: ಉಡಿ ತುಂಬಿದ ಮುತ್ತೈದೆಯರು

ಪ್ರೀತಮ ಶೇಟ, ಕೇಶವ ನಾಯ್ಕ, ಕೃಷ್ಣಾನಂದ ಮಹಾಲೆ, ದಿನೇಶ ನಾಯ್ಕ, ಸಂದೀಪ ಶೇಟ, ಮಾದೇವ ಮೊಗೇರ, ಜೀವೋತ್ತಮ ಪೈ ಮತ್ತಿತರರು ಉಪಸ್ಥಿತರಿದ್ದರು.

Mari jatre/ ಅಮಟೆ ಮರಕ್ಕೆ ಕಂಪು; ಮಾರಿ ಮೂರ್ತಿ ತಯಾರಿಕೆಗೆ ಚಾಲನೆ