ಭಟ್ಕಳ: ಇಂದು (ಜುಲೈ ೨೩) ಬೆಳಿಗ್ಗೆ ನಗರದ ಮಾರಿಕಾಂಬಾ‌ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಪ್ರಸಿದ್ಧ ಮಾರಿ ಜಾತ್ರೆಗೆ ಚಾಲನೆ (mari Jathre begins) ನೀಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಇಂದು (ಜುಲೈ ೨೩)ಬುಧವಾರದಂದು ಮುಂಜಾನೆ ಮಾರಿ ದೇವಿಯನ್ನು ಭಕ್ತರು ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಕರೆತಂದರು. ಭಕ್ತರ ಜಯಘೋಷ, ಚಂಡೆ ವಾದ್ಯದೊಂದಿಗೆ ಸಕಲ ಸಂಭ್ರಮದಿಂದ ಮೆರವಣಿಗೆ ನಡೆಯಿತು.

ವಿಡಿಯೋ ಸಹಿತ ಇದನ್ನೂ ಓದಿ : Mari Jathre/ ಜುಲೈ ೨೩ರಿಂದ ಭಟ್ಕಳದ ಮಾರಿ ಜಾತ್ರೆ 

ಅದ್ದೂರಿಯಾಗಿ ಕರೆತರಲಾದ ಮಾರಿ ದೇವಿಯ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪಿಸಲಾಯಿತು. ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿದೆ. (mari Jathre begins) ಪ್ರತಿಷ್ಠಾಪನೆ ಸಂದರ್ಭದಲ್ಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಿಯ ದರ್ಶನ, ಪೂಜಾ ಸೇವೆ, ಹರಕೆ ಸೇವೆ ಆರಂಭಗೊಂಡಿದೆ. ದೇವಿಯ ದರ್ಶನಕ್ಕೆ ಸರತಿ ಸಾಲು, ಹರಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : Best associate professor award/ ಡಾ ಭಾಗೀರಥಿ ನಾಯ್ಕ ಗೆ ಅತ್ಯುತ್ತಮ ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿ

ಎರಡು ದಿನಗಳ ಮಾರಿ ಜಾತ್ರೆ (Mari Jathre) ನಡೆಯಲಿದೆ. ನಾಳೆ (ಜುಲೈ ೨೪ರಂದು) ಸಂಜೆ ೪.೩೦ಕ್ಕೆ ಮಾರಿ ದೇವಿಗೆ ವಿಸರ್ಜನಾ ಪೂಜೆ ನೆರವೇರಲಿದೆ. ಭಕ್ತರು ತಲೆ ಮೇಲೆ ದೇವಿ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಜಾಲಿಕೋಡಿ ಸಮುದ್ರದಲ್ಲಿ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಮಾರಿ ಜಾತ್ರೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : devotional music/ ಚಿತ್ರಾಪುರ ಶ್ರೀಮಠದಲ್ಲಿ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ

ತವರುಮನೆಯ ಪೂಜೆ:
ನಿನ್ನೆ (ಜುಲೈ ೨೨) ತಡರಾತ್ರಿಯವರೆಗೂ ವಿಶ್ವಕರ್ಮ ಸಮಾಜದವರಿಂದ ತವರು ಮನೆಯ ವಿಶೇಷ ಪೂಜೆಯನ್ನು ನೆರವೇರಿಸಿದರು. ಆ ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ, ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳು, ಊರಿನ ಭಕ್ತರು ಪಾಲ್ಗೊಂಡಿದ್ದರು.

ಮಾರಿಯಮ್ಮ ಗದ್ದುಗೆ ಏರುವ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Snakes/ ಕಾಡಿನಿಂದ ಮನೆಗಳತ್ತ ಹಾವುಗಳು