ಭಟ್ಕಳ ಡೈರಿ ವರದಿ

ಮಂಗಳೂರು: ಶರನ್ನವರಾತ್ರಿ ಉತ್ಸವದ ನಾಲ್ಕನೇ ದಿನವಾದ ಬುಧವಾರ ಮಂಗಳೂರಿನ ಐತಿಹಾಸಿಕ ನೀರೇಶ್ವಾಲ್ಯದಲ್ಲಿರುವ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶಾರದಾಂಬಾ ದೇವಿಯ ಸನ್ನಿಧಿಯಲ್ಲಿ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ಉಡುಪಿ ಜಿಲ್ಲೆಯ ಖ್ಯಾತ ಕಲಾವಿದ ಉಮೇಶ ಮೇಸ್ತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಭಟ್ಕಳದ ಉಮೇಶ ಮುಂಡಳ್ಳಿ ಬಳಗದಿಂದ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ದೇವಿ ಭಕ್ತಿಗೀತೆಗಳು ಭಕ್ತರನ್ನು ಮನಸೂರೆಗೊಂಡವು.

ಉಮೇಶ ಮೇಸ್ತ ಅವರು ಹಾರ್ಮೋನಿಯಂ ಸಾಥ್‌ನೊಂದಿಗೆ ಭಕ್ತಿಗೀತೆಗಳನ್ನು ಹಾಡಿದರು. ಉಮೇಶ ಮುಂಡಳ್ಳಿ ಅವರು ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಜಗದಂಬೆ ದೇವಿ ಭವಾನಿ’ ಸೇರಿದಂತೆ ಜನಪ್ರಿಯ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತಿಭಾವದ ವಾತಾವರಣ ನಿರ್ಮಿಸಿದರು. ಮಂಗಳೂರಿನ ಸವಿತಾ ಸುರೇಶ್ ಹಾಗೂ ಶಿರೂರಿನ ಕುಮಾರ್ ಸುದರ್ಶನ ಗಾಯನದಲ್ಲಿ ಸಾಥ್ ನೀಡಿದರು. ಶ್ಯಾಮ್ ಶಿರೂರು ರಿದಂ ಪ್ಯಾಡ್‌ನಲ್ಲಿ ಹಾಗೂ ಸುಧಾಮ್ ಶಿರೂರು ತಬಲಾದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ವತಿಯಿಂದ ಎಲ್ಲ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಇದನ್ನೂ ಓದಿ :

ಭಟ್ಕಳದ ಮಹಾಲೆ ಮನೆಯಲ್ಲಿ ನವರಾತ್ರಿ ಸಂಭ್ರಮ

ಮುಂಡಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಿಗಾನ ಸುಧೆ: ಉಮೇಶ ಮುಂಡಳ್ಳಿ ಗಾಯನಕ್ಕೆ ಭಕ್ತರು ಮಂತ್ರಮುಗ್ಧ