ಭಟ್ಕಳ: 20 ಲಕ್ಷ ರೂ. ಹಣ ಬೇಡಿಕೆ ಹಾಕಿ ಬೆದರಿಕೆ ನೀಡಿದ ಪ್ರಕರಣದಲ್ಲಿ ಭಟ್ಕಳ (Bhatkal) ಮೂಲದ ಯುವಕನ ವಿರುದ್ಧ ಪೊಲೀಸರು ಮುಂಜಾಗ್ರತಾ ಕ್ರಮ (precautionary measures) ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಬ್ಬುಹುರೇರಾ ಕಾಲೋನಿ, ಫಿರ್ದೋಸ್ ನಗರ ನಿವಾಸಿ ಮೊಹಮ್ಮದ್ ಫಾರಿಸ್ ತಂದೆ ಅಬ್ದುಲ್ ಮುತಲ್ಲಬ್ ಕೋಡಿ ಎಂದು ಗುರುತಿಸಲ್ಪಟ್ಟ ಈತನು, ಕಳೆದ ಆಗಸ್ಟ್‌ 16ರಂದು ನಗರದ ತರಕಾರಿ ಅಂಗಡಿ ವ್ಯಾಪಾರಿ ಒಬ್ಬರಿಗೆ ದೂರವಾಣಿ ಕರೆಮಾಡಿ, “ನಿನ್ನ ಮಗಳ ಖಾಸಗಿ ಫೋಟೋ ಮತ್ತು ವಿಡಿಯೋ ನನ್ನ ಬಳಿ ಇದೆ. ತಕ್ಷಣ 20 ಲಕ್ಷ ರೂ. ಕೊಡಬೇಕು. ಕೊಡದಿದ್ದರೆ ಅವುಗಳನ್ನು ಎಲ್ಲೆಡೆ ಹರಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: University Rank/ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಮತ್ತೊಂದು ರ‍್ಯಾಂಕ್

ಈ ಕುರಿತು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು,ವಿಚಾರಣೆಯ ಬಳಿಕ ಆರೋಪಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಇವನಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಕೃತ್ಯಗಳು ನಡೆಯುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಶಾಂತಿ ಭಂಗವಾಗುವ ಭೀತಿ ಮನಗಂಡ ಪೊಲೀಸರು, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) ಕಲಂ 126ರಡಿ ₹1 ಲಕ್ಷ ಮೊತ್ತದ ಇಂಟರಿಮ್ ಬಾಂಡ್ ಕೊಡಿಸುವಂತೆ ಆದೇಶ ಕೈಗೊಳ್ಳಲಾಗಿದೆ (precautionary measures) ಎಂದು ತಿಳಿದುಬಂದಿದೆ.

ಇದನ್ನು ಓದಿ: WordPress Campus Connect/ ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರೇರಣೆ