ಭಟ್ಕಳ: ತಾಲೂಕಿನ ಹೊನ್ನೆಗದ್ದೆಯ ಪ್ರಜ್ವಲ ಭಾಸ್ಕರ ನಾಯ್ಕ ಲಂಡನ್‌ನ ಸೌತ್ ಶೀಲ್ಡ್ಸ್ ಮೆರೈನ್ ಶಾಲೆಯಲ್ಲಿ ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ (course in London). ಕೋರ್ಸ್ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಜಾನ್ ಮಿಲ್ಲರ್ ಅವರು ಪ್ರಜ್ವಲ್ ಅವರಿಗೆ ಪ್ರಮಾಣಪತ್ರ ಪ್ರದಾನಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಜ್ವಲ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಶಿರಾಲಿಯ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ದ್ವಿತೀಯ ಪಿಯುಸಿ ಬಳಿಕ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದರು. ಅಲ್ಲಿ ಸೌತ್ ಶೀಲ್ಡ್ಸ್ ಮೆರೈನ್ ಶಾಲೆಯಲ್ಲಿ ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್‌ಗೆ ಸೇರ್ಪಡೆಗೊಂಡು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ (course in London). ಪ್ರಜ್ವಲ ಅವರು ಭಟ್ಕಳ (Bhatkal) ತಾಲೂಕಿನ ಹೊನ್ನೆಗದ್ದೆ-ಹೆಬ್ಬಳೆಯ ನಿವಾಸಿಗಳಾದ ಭವಾನಿ ಮತ್ತು ಭಾಸ್ಕರ ನಾಯ್ಕ ದಂಪತಿಯ ಪುತ್ರರಾಗಿದ್ದಾರೆ.