ಭಟ್ಕಳ (Bhatkal): ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಸಂಯೋಜನೆಗೆ ಒಳಪಟ್ಟ ಅಂತರ್ ಮಹಾವಿದ್ಯಾಲಯಗಳ (inter College) ತೃತೀಯ ವಲಯ ಮಟ್ಟದ ಹಾಗೂ ಅಂತರ್ ವಲಯ (inter zonal) ಮಟ್ಟದ ಪುರುಷ ಹಾಗೂ ಮಹಿಳೆಯರ ಟೆನ್ನಿಸ್ (table tennis) ಪಂದ್ಯಾವಳಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (SGS college) ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಭಟ್ಕಳದ ರೋಟರಿ ಕ್ಲಬ್‌ (rotary club) ಖಜಾಂಚಿ ಶ್ರೀನಿವಾಸ ಪಡಿಯಾರ, “ನನ್ನ ಕಾಲೇಜು ದಿನಗಳು ನೆನಪಾಗಿವೆ. ಆಟವನ್ನು ಗೆಲ್ಲಲು ಆಡಬೇಕು. ಭಾಗವಹಿಸಲು ಅಲ್ಲ. ಪ್ರತಿಸ್ಪರ್ಧಿಯನ್ನು ಸೋಲಿಸಲು ಆಟವಾಡಿ, ಸೋಲಲು ಅಲ್ಲ” ಎಂದು ಹೇಳಿದರು.

ವಿಡಿಯೋ ಸಹಿತ ಇದನ್ನು ಓದಿ: Bike Accident/ ಐ ಆರ್ ಬಿ ಹೊಂಡಕ್ಕೆ ಬಿದ್ದ ಬೈಕ್ ಸವಾರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಟ್ರಸ್ಟಿ ಡಾ. ಸುರೇಶ ನಾಯಕ, “ಸುಧಾರಿತ ದೇಹದಲ್ಲಿ ಸದೃಢ ಮನಸ್ಸು ನಿರ್ಮಾಣವಾಗುತ್ತದೆ. ಕ್ರೀಡಾ ಮನೋಭಾವದಿಂದ ಆಟವಾಡಿ, ನಿಮ್ಮ ವ್ಯಕ್ತಿತ್ವವನ್ನೂ ಬಲಪಡಿಸಿ” ಎಂದು ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದರು.

ವಿಡಿಯೋ ಸಹಿತ ಇದನ್ನು ಓದಿ : cochin shipyard/ ಕಡಲ ತೀರದಲ್ಲಿ ಬಾರ್ಜ್‌ ಪ್ರತ್ಯಕ್ಷ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಟೇಬಲ್ ಟೆನಿಸ್ (table tennis) ಪಂದ್ಯಾವಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ನಿರ್ದೇಶಕ ವಿನಾಯಕ ನಾಯ್ಕ, ಕಾಲೇಜಿನ ಉಪನ್ಯಾಸಕರು, ವಿವಿಧ ಕಾಲೇಜಿನ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕ ಶಾಂತರಾಯ ಗೊಂಡ ವಂದಿಸಿದರು.

ಇದನ್ನು ಓದಿ : Plantation/ ಮನೆಗೊಂದು ಗಿಡ ಅಭಿಯಾನ ಯಶಸ್ವಿ 

ಫಲಿತಾಂಶ: ತೃತೀಯ ವಲಯ ಪುರುಷರ ವಿಭಾಗದಲ್ಲಿ ಎಂ ಜೆ ಸಿ ಸಿದ್ದಾಪುರ – ಪ್ರಥಮ ಸ್ಥಾನ, ಜಿ ಎಫ್ ಜಿ ಸಿ ಸಿದ್ದಾಪುರ – ದ್ವಿತೀಯ ಸ್ಥಾನ, ಬಂಗೂರನಗರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ದಾಂಡೇಲಿ – ತೃತೀಯ ಸ್ಥಾನ ಗಳಿಸಿದವು. ಮಹಿಳೆಯರ ವಿಭಾಗದಲ್ಲಿ ಬಂಗೂರನಗರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ದಾಂಡೇಲಿ – ಪ್ರಥಮ ಸ್ಥಾನ; ಎಂ ಜೆ ಸಿ ಸಿದ್ದಾಪುರ – ದ್ವಿತೀಯ ಸ್ಥಾನ; ಅಂಜುಮನ್ ಪದವಿ ಕಾಲೇಜು, ಭಟ್ಕಳ – ತೃತೀಯ ಸ್ಥಾನ ಗಳಿಸಿದವು.

ಇದನ್ನು ಓದಿ: house theft/ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

ಅಂತರ ವಲಯ ಪುರುಷರ ವಿಭಾಗದಲ್ಲಿ ಜೆ ಎಸ್ ಎಸ್ ಕಾಲೇಜು, ಧಾರವಾಡ (Dharwad)- ಪ್ರಥಮ ಸ್ಥಾನ; ಎಂ ಜೆ ಸಿ ಸಿದ್ದಾಪುರ (siddapura)- ದ್ವಿತೀಯ ಸ್ಥಾನ; ಪಿ ಜಿ ಜಿಮಖಾನ, ಕ ವಿ ವಿ ಧಾರವಾಡ – ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಬಂಗೂರನಗರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ದಾಂಡೇಲಿ (Dandeli) – ಪ್ರಥಮ ಸ್ಥಾನ; ಪಿ ಜಿ ಜಿಮಖಾನ, ಕ ವಿ ವಿ ಧಾರವಾಡ – ದ್ವಿತೀಯ ಸ್ಥಾನ; ಎಂ ಜೆ ಸಿ ಸಿದ್ದಾಪುರ – ತೃತೀಯ ಸ್ಥಾನ ಗಳಿಸಿದವು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಇದನ್ನು ಓದಿ: cyber crime/ ಅತಿಯಾಸೆ ಮಾಡಿದವಗೆ ೯.೨೩ ಲಕ್ಷ ರೂ. ಟೋಪಿ