ಕಾರವಾರ: ಉತ್ತರ ಕನ್ನಡ (Uttara Kannada) ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದ ಜುಲೈ ೧೫ರವರೆಗೆ ವಾಡಿಕೆಗಿಂತ ಶೇ ೨೫ರಷ್ಟು ಕಡಿಮೆ ಮಳೆಯಾಗಿದೆ (rainfall deficit). ಸಾಮಾನ್ಯವಾಗಿ ಈ ಅವಧಿಯಲ್ಲಿ ೧೨೬೫ ಮಿಮೀ ಮಳೆ ಬೀಳಬೇಕಾಗಿದ್ದು, ಕೇವಲ ೯೪೫.೪ ಮಿಮೀ ಮಳೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಶೇ ೩೧, ಭಟ್ಕಳ ಶೇ ೩೭, ಹಳಿಯಾಳ ಶೇ ೩೧,ಹೊನ್ನಾವರ ಶೇ ೧೯, ಕಾರವಾರ ಶೇ ೨೦,ಕುಮಟಾ ಶೇ ೨೧, ಮುಂಡಗೋಡು ಶೇ ೨೩, ಸಿದ್ದಾಪುರ ಶೇ ೧೨, ಶಿರಸಿ ಶೇ 8, ಸೂಪಾ ಶೇ ೧೧, ಯಲ್ಲಾಪುರ ಶೇ ೩೮ ಮತ್ತು ದಾಂಡೇಲಿಯಲ್ಲಿ ಶೇ ೧೨ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ವಾಡಿಕೆ ಮಳೆ ೨೧೭.೫ ಮಿಮೀ ಆಗಬೇಕಾಗಿದ್ದು, ೩೮.೪ ಮಿಮೀ ಮಾತ್ರ ಮಳೆ ಆಗುವ ಮೂಲಕ ಶೇ ೮೨ರಷ್ಟು ಮಳೆಯ ಕೊರತೆಯಾಗಿದೆ (rainfall deficit).
road accident/ ಕೈಕಿಣಿ ಬಸ್ತಿಯಲ್ಲಿ ಭೀಕರ ರಸ್ತೆ ಅಪಘಾತ: ಹೆದ್ದಾರಿ ಕಾಮಗಾರಿಗೆ ಜನರ ಆಕ್ರೋಶ


