ಭಟ್ಕಳ: ವಿಜಯಪುರ (vijayapura) ಜಿಲ್ಲೆಯ ಬಸವನ ಬಾಗೇವಾಡಿಯ (basavana bagewadi) ಆರೂಢ ಸೇವಾ ಸಂಸ್ಥೆ ಆಯೋಜಿಸಿದ ಗುರು ಆರೂಢ ಶ್ರಿಗಳ ಪುಣ್ಯ ಸ್ಮರಣೋತ್ವದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸುಗಮಸಂಗೀತ ಗಾಯಕ ಸಾಹಿತಿ ಉಮೇಶ ಮುಂಡಳ್ಳಿ ಅವರಿಗೆ ರಾಜ್ಯಮಟ್ಟದ ‘ಆರೂಢ ಶ್ರೀ’ (Arudha Shri) ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪಟ್ಟಣದ ಶ್ರೀ ಕಾಳಿಕಾದೇವಿ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ ೨೨ ರವಿವಾರದಂದು ನಡೆದ ಕಾರ್ಯಕ್ರಮದಲ್ಲಿ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮಿ ಉಮೇಶ ಮುಂಡಳ್ಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಹರಸಿದರು.  ವೇದಿಕೆಯಲ್ಲಿ ಅರಟಾಳದ ಶಿವಪುತ್ರ ಶರಣರು ಸಾನಿಧ್ಯ ವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ ಎಲ್ ಹಿರೆಮಠ ಅವರು ಆರೂಢ ಕುರಿತು ನುಡಿನಮನ ಸಲ್ಲಿಸಿದರು.

stone pelting/ ಅನ್ಯಕೋಮಿನ ಯುವಕರಿಂದ ಮನೆಗಳ ಮೇಲೆ ಕಲ್ಲು ತೂರಾಟ: ಹಿಂದೂ ಕಾರ್ಯಕರ್ತರಿಂದ ಮುರ್ಡೇಶ್ವರ ಠಾಣೆ ಎದುರು ಪ್ರತಿಭಟನೆ

ಕಾರ್ಯಕ್ರಮವನ್ನು ಕದಳಿ ವೇದಿಕೆಯ ಅಧ್ಯಕ್ಷೆ ಪ್ರಾಧ್ಯಾಪಕಿ ಡಾ ಉಷಾದೇವಿ ಕಾರ್ಯಕ್ರಮ ಉದ್ಘಾಟಿಸಿ ಆರೂಢ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಜಯಪುರದ ಶ್ರೀ ಶೈಲ ಆರೂಢರು ವಹಿಸಿದ್ದರು. ರಾಜ್ಯದ ಹನ್ನೊಂದು ಮಂದಿ ಸಾಧಕರಿಗೆ ಈ ಸಂದರ್ಭದಲ್ಲಿ ಆರೂಢ ಶ್ರೀ (Arudha Shri) ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಆರೂಢ ಸಂಸ್ಥೆಯ ಅಧ್ಯಕ್ಷರು ನ್ಯಾಯವಾದಿ ಗುರುರಾಜ ಕನ್ನೂರು, ಬಾಗೇವಾಡಿಯ ಸಾಮಾಜಿಕ ಪರಿಶೋಧನ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಮಾದನಶೆಟ್ಟಿ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

SSLC progress review meeting/ ಸಚಿವರಿಂದ ಎಸ್ ಎಸ್ ಎಲ್ ಸಿ ಪ್ರಗತಿ ಪರಿಶೀಲನಾ ಸಭೆ