ಭಟ್ಕಳ: ಬೆಳಗಾವಿಯ (Belagavi) ಬ್ಲೂಮಿಂಗ್ ಬಡ್ಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಿಐಎಸ್‌ಸಿಇ (CISCE) ವಲಯ ಮಟ್ಟದ (Zonal-Level) ಅಥ್ಲೆಟಿಕ್ಸ್ ಮತ್ತು ಕ್ರೀಡಾಕೂಟದಲ್ಲಿ (Sports Meet) ಭಟ್ಕಳದ (Bhatkal) ವಿದ್ಯಾಂಜಲಿ ಪಬ್ಲಿಕ್ ಶಾಲೆಯ (Vidyanjali Public School) ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿಗಳು ಒಟ್ಟು ೧೦ ಚಿನ್ನ, ೬ ಬೆಳ್ಳಿ ಹಾಗೂ ೩ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡು ಮಿಂಚಿದ್ದಾರೆ. ೩೦೦೦ ಮೀ ಓಟದಲ್ಲಿ ೧೦ನೇ ತರಗತಿಯ ವಿಜೇತ್, ೮೦೦ ಮೀ ಓಟದಲ್ಲಿ ನಿತೀನ್ ಹಾಗೂ ಶಾಟ್‌ಪುಟ್ ಮತ್ತು ಹ್ಯಾಮರ್ ತ್ರೋ ಸ್ಪರ್ಧೆಗಳಲ್ಲಿ ೯ನೇ ತರಗತಿಯ ತುಷಾರ್ ಮಹಾಲೆ ಚಿನ್ನದ ಪದಕ (gold medal) ಗೆದ್ದು ಸಾಧನೆ ಬರೆದಿದ್ದಾರೆ. ಇದರೊಂದಿಗೆ ೪x೪೦೦ ಮೀ ರಿಲೇ, ವಾಲಿಬಾಲ್ ಹಾಗೂ ಕಬಡ್ಡಿ ಸ್ಪರ್ಧೆಗಳಲ್ಲೂ ಶಾಲೆಯ ತಂಡಗಳು ಪ್ರಥಮ ಸ್ಥಾನ ಗಳಿಸಿ ಬಂಗಾರಕ್ಕೆ ಮುತ್ತಿಕ್ಕಿವೆ.

Appeal to Health Minister/ ಭಟ್ಕಳ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಸಚಿವಗೆ ಮನವಿ

ಕ್ರೀಡಾಕೂಟದ (Sports Meet) ಇದೇ ವಿಭಾಗದಲ್ಲಿ ೧೫೦೦ ಮೀ ಓಟದಲ್ಲಿ ಲತೀನ್, ೮೦೦ ಮೀ ಓಟದಲ್ಲಿ ಕೌಶಿಕ್, ೪೦೦ ಮೀ ಓಟದಲ್ಲಿ ಶರತ್, ಡಿಸ್ಕಸ್ ತ್ರೋನಲ್ಲಿ ತುಷಾರ್ ಮಹಾಲೆ ಮತ್ತು ಜಾವೆಲಿನ್ ತ್ರೋನಲ್ಲಿ ಸಮೀರ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಗಳನ್ನು (silver medal) ಜಯಿಸಿದ್ದಾರೆ. ೩೦೦೦ ಮೀ ಓಟದಲ್ಲಿ ರಾಘವೇಂದ್ರ, ೧೦೦ ಮೀ ಓಟದಲ್ಲಿ ಶರತ ಹಾಗೂ ಜಾವೆಲಿನ್ ತ್ರೋನಲ್ಲಿ ನಿತೀನ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ (bronze medal) ಭಾಜನರಾಗಿದ್ದಾರೆ.

Murudeshwar Bus Stand/ ಅವ್ಯವಸ್ಥೆಯ ತಾಣ ಮುರ್ಡೇಶ್ವರ ಬಸ್ ನಿಲ್ದಾಣ

೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲೂ ಕ್ರೀಡಾಪಟುಗಳು ಸೈ ಎನಿಸಿಕೊಂಡಿದ್ದು, ವಿದ್ಯಾರ್ಥಿ ಕಿಶನ್ ೨೦೦ ಮೀ ಓಟ ಹಾಗೂ ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ದ್ವಿಚಿನ್ನದ ಸಾಧನೆ ಮಾಡಿದ್ದಾರೆ. ಜೊತೆಗೆ ೪೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಭಾಗದ ಕಬಡ್ಡಿ ತಂಡವೂ ಸಹ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ವಸಂತ ಬೆಂಡವಾಡಿ ಹಾಗೂ ತರಬೇತುದಾರರ ತಂಡ ಮಾರ್ಗದರ್ಶನ ನೀಡಿತ್ತು.

CCTV surveillance/ ಬಿಳಲಖಂಡದಲ್ಲಿ ಕಸ ಎಸೆಯುವವರ ಮೇಲೆ ಸಿಸಿ ಕ್ಯಾಮೆರಾ ಕಣ್ಗಾವಲು