ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರವಾದ ಮುರುಡೇಶ್ವರ ಬಸ್ ನಿಲ್ದಾಣದಲ್ಲಿ (Murudeshwar Bus Stand) ಸೂಕ್ತ ಮೂಲಸೌಕರ್ಯಗಳಿಲ್ಲದೆ ಜನತೆ ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ನಿತ್ಯವೂ ನೂರಾರು ಬಸ್‌ಗಳ ಓಡಾಟ, ಸಾವಿರಾರು ಜನರ ಪಯಣ, ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಈ ಬಸ್‌ ನಿಲ್ದಾಣ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬು ವಾಸನೆಯ ತಾಣವಾಗಿ ಮಾರ್ಪಟ್ಟಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರ ಬಸ್ ನಿಲ್ದಾಣದ (Murudeshwar Bus Stand) ಸ್ವಚ್ಛತೆ ಮರಿಚಿಕೆಯಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, (garbage) ಗೋಡೆಗೆ ಮುಖ ಮಾಡಿ ಮೂತ್ರ ವಿಸರ್ಜಸುವ ಜನ, ಗೋಡೆಗಳ ಮೇಲೆಲ್ಲಾ ಗುಟ್ಕಾ ಉಗುಳಿದ ಚಿತ್ತಾರಗಳು, ಕುಡಿಯುವ ನೀರಿನ ನಳದ ಹತ್ತಿರವೂ ದುರ್ನಾತ. ಅಲ್ಲದೇ ಬಸ್‌ ನಿಲ್ದಾಣ ಸುತ್ತಮುತ್ತ ಎಲ್ಲೆಂದರಲ್ಲಿ ಕಸ, ಮಲ-ಮೂತ್ರ ವಿಸರ್ಜಿಸಿದ ಘಾಟು ವಾಸನೆ, ಅಲ್ಲಲ್ಲಿ ನಿಂತಿರುವ ನೀರು, ಮುಖ್ಯವಾಗಿ ಡ್ರೈನೇಜ್‌ ನೀರು (drainage water) ಹರಿಯದೇ ನಾರುತ್ತಿರುವ ಚರಂಡಿ. ಇದು ಬಸ್‌ ನಿಲ್ದಾಣದ ಇಂದಿನ ಸ್ಥಿತಿ.

CCTV surveillance/ ಬಿಳಲಖಂಡದಲ್ಲಿ ಕಸ ಎಸೆಯುವವರ ಮೇಲೆ ಸಿಸಿ ಕ್ಯಾಮೆರಾ ಕಣ್ಗಾವಲು

ಅಗತ್ಯ ಸೌಲಭ್ಯಗಳಿಲ್ಲ: ಬಸ್ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳ ಕೊರತೆಯ ಎದ್ದುಕಾಣುತ್ತಿದೆ. ಮುಖ್ಯವಾಗಿ ಪ್ರಯಾಣಿಕರಿಗೆ (passengers) ಕುಡಿಯುವ ನೀರಿನ (drinking water) ವ್ಯವಸ್ಥೆಯಿಲ್ಲ, ಇತ್ತೀಚೆಗೆ ಶೌಚಾಲಯದ ನಿರ್ವಹಣೆ ಸರಿಯಾಗಿಲ್ಲದ ಕಾರಣ ಮೂಗು ಮುಚ್ಚಿಕೊಂಡು ಹೋಗಬೇಕು. ನಿಲ್ದಾಣದಲ್ಲಿ ಸಮರ್ಪಕ ಲೈಟಿಂಗ್ ವ್ಯವಸ್ಥೆಯಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಕಟ್ಟಡ ಪಕ್ಕದಲ್ಲಿಯೇ ಪ್ರಯಾಣಿಕರಿಂದ ಮೂತ್ರ ವಿಸರ್ಜನೆ ನಡೆಯುವುದು ಸಾಮಾನ್ಯವಾಗಿದೆ.

Humanitarian aid/ ಚಿಪ್ಪಿಕಲ್ಲು ದುರಂತ: ಸಿಬ್ಬಂದಿ ಕುಟುಂಬಕ್ಕೆ ₹೧.೧೦ ಲಕ್ಷ ಎಫ್‌ಡಿ, ಮಗನ ಶಿಕ್ಷಣದ ಹೊಣೆ ಹೊತ್ತ ಶಾಲೆ

ಮಳೆ ಬಂದರೆ ಕೆಲವೆಡೆ ನೀರು ಒಳ ಹೊಕ್ಕುವ ಪ್ರಮೇಯ ಬರುತ್ತವೆ. ಜೋರಾಗಿ ಗಾಳಿ ಬಂದರೆ ಬಸ್ ನಿಲ್ದಾಣದಲ್ಲಿ ನಿಂತವರು ಒದ್ದೆಯಾಗುತ್ತಾರೆ. ಇಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಬಸ್‌ಗೆ ಕಾಯುವ ಪ್ರಯಾಣಿಕರು ಪರದಾಡುವಂತಾಗಿದೆ. ದಿನನಿತ್ಯ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುವ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ಬೇಕೆಂದು ಪ್ರಯಾಣಿಕರು ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಆದರೆ ಇದನ್ನು ಸಕಾರಗೊಳಿಸಲು ಸಂಬಂಧಪಟ್ಟವರು ಮುತುವರ್ಜಿ ವಹಿಸಿಲ್ಲ ಎಂಬುದು ಜನರ ಆರೋಪವಾಗಿದೆ.

Humanitarian aid/ ಚಿಪ್ಪಿಕಲ್ಲು ದುರಂತ: ಸಿಬ್ಬಂದಿ ಕುಟುಂಬಕ್ಕೆ ₹೧.೧೦ ಲಕ್ಷ ಎಫ್‌ಡಿ, ಮಗನ ಶಿಕ್ಷಣದ ಹೊಣೆ ಹೊತ್ತ ಶಾಲೆ

ಪ್ರತಿದಿನವೂ ೫೦ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ಒಳಗೊಂಡು ಅಂದಾಜು ೨ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ. ಆದರೆ, ಬಸ್ ನಿಲ್ದಾಣದಲ್ಲಿ ಫ್ಲಾಟ್‌ಫಾರಂ ವ್ಯವಸ್ಥೆ ಇಲ್ಲ. ನಾಮಫಲಕಗಳ ವ್ಯವಸ್ಥೆ ಇಲ್ಲ. ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳುವ ಆಸನಗಳ ಮೇಲೆ ಜನರು ಮಲಗಿರುತ್ತಾರೆ. ಹೀಗಾಗಿ ನಿಲ್ದಾಣ ಜನರಿಗೆ ಉಪಯೋಗವಾಗುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು ಎನ್ನುವುದು ಜನರ ಆಗ್ರಹವಾಗಿದೆ.

Jan Dhan Yojana/ ಜನಧನ ಯೋಜನೆ ಸಾಲದ ಆಮಿಷಕ್ಕೆ ₹೬೮.೫೮ ಲಕ್ಷ ಕಳಕೊಂಡ ಭಟ್ಕಳದ ಮಹಿಳೆ