ಭಟ್ಕಳ: ಅತಿ ಕಠಿಣ ಗಂಡಕಿ ಯಾತ್ರೆ ಕೈಗೊಂಡ ಜಿಎಸ್‌ಬಿ (GSB) ಸಮಾಜದ ೨೩ನೇ ಯತಿವರ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿಯವರ (Vidyadhiraja Theertha Sripad Vader Swami) ೫ನೇ ವರ್ಷದ ಪುಣ್ಯತಿಥಿ (Punyatithi) ಶುಕ್ರವಾರ ಭಟ್ಕಳ (Bhatkal) ಮತ್ತು ಗೋವಾ (Goa) ರಾಜ್ಯದ ಪರ್ತಗಾಳಿಯಲ್ಲಿ (Parthagali) ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗೋವಾದ ಪರ್ತಗಾಳಿಯ ಶ್ರೀ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮಿಯವರು (Vidyadheesha Theertha Sripad Vader Swami) ತಮ್ಮ ಪ್ರಿಯಗುರುಗಳ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು. ಗುರುಪರಂಪರೆಯ ಮಹತ್ವ, ಧರ್ಮಾಚರಣೆ ಹಾಗೂ ಭಗವದ್ಭಕ್ತಿಯ ಸಂದೇಶವನ್ನು ಸಾರಿ ಭಕ್ತಸಂಕುಲಕ್ಕೆ ಆಶೀರ್ವಾದ ನೀಡಿದರು

Sports Meet/ ಸಿಐಎಸ್‌ಸಿಇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಂಜಲಿ ಶಾಲೆಗೆ ಪದಕಗಳ ಸುರಿಮಳೆ

ಭಟ್ಕಳದ (Bhatkal) ಶ್ರೀ ವಡೇರ ಮಠದಲ್ಲೂ (Vader Math) ಪುಣ್ಯತಿಥಿಯ (Punyatithi) ಅಂಗವಾಗಿ ವೇದಮೂರ್ತಿ ಕಿಶೋರ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀಮದ್ ವಿದ್ಯಾಧಿರಾಜ ತೀರ್ಥರ ಪುಣ್ಯತಿಥಿ, ಆಷಾಢ ಶುದ್ಧ ದಶಮಿಯ ಅಂಗವಾಗಿ ಮಹಾಪೂಜೆ ಹಾಗೂ ಮಹಾಸಂತರ್ಪಣೆ ಸೇವೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು. ದಿವಂಗತ ಅಣ್ಣಪ್ಪ ರಮಣ ಕಾಮತ್ ಅವರ ಕುಟುಂಬಸ್ಥರು ಅನ್ನಸಂತರ್ಪಣೆ ಸೇವಾದಾರರಾಗಿ ಸೇವೆ ಸಲ್ಲಿಸಿದರು.

Appeal to Health Minister/ ಭಟ್ಕಳ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಸಚಿವಗೆ ಮನವಿ