ಭಟ್ಕಳ ಡೈರಿ ವರದಿ
ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ನಡೆಸಿದ ಬಿಬಿಎ ಪದವಿ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಕಂಪ್ಯೂಟರ್ ಅಪ್ಲಿಕೇಶನ್ (ಎಐಎಂಸಿಎ) ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಟಾಪ್ ಟೆನ್ನಲ್ಲಿ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
೨೦೨೫ರ ಆಗಸ್ಟ್ನಲ್ಲಿ ನಡೆದ ಬಿಬಿಎ ಸೆಮಿಸ್ಟರ್ ಪರೀಕ್ಷೆಯಲ್ಲಿ ರಿಹಾಬ್ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿದರೆ, ಅಲ್ ರಿಫಾ ಆರನೇ ಹಾಗೂ ಹುರ್ಬಿ ಏಳನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಜಮೀಲ್ ಹುಸೇನ್ ಫಕರ್ಡೆ ಅವರ ಪುತ್ರಿ ರಿಹಾಬ್ ಶೇ. ೯೩.೩೭ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾವಾ ಅಮೀರ್ ಅವರ ಪುತ್ರಿ ಅಲ್ ರಿಫಾ ಶೇ. ೯೨.೩೦ ಅಂಕಗಳೊಂದಿಗೆ ಆರನೇ ರ್ಯಾಂಕ್ ಗಳಿಸಿದ್ದಾರೆ. ಇಬ್ರಾಹಿಂ ಶೇಖ್ ಅವರ ಪುತ್ರಿ ಹುರ್ಬಿ ಶೇ. ೯೨.೨೬ ಅಂಕಗಳೊಂದಿಗೆ ಏಳನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ :
ಮಂಗಳೂರಿನ ನೀರೇಶ್ವಾಲ್ಯ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಭಕ್ತಿಸಂಗೀತದ ಸಂಭ್ರಮ
ಭಟ್ಕಳದ ಮಹಾಲೆ ಮನೆಯಲ್ಲಿ ನವರಾತ್ರಿ ಸಂಭ್ರಮ




