ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಗೊಂಚಿಹಿತ್ಲು ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಬಾಲಕನ ಬಲ ಕಾಲಿನ ಮೂಳೆ ಮುರಿದಿದ್ದು, ಕಾಲಿನ ಬೆರಳುಗಳಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಟ್ಕಳ ತಾಲೂಕಿನ ಬೆಂಗ್ರೆಯ ಗೊಂಚಿಹಿತ್ಲು ಪ್ರದೇಶದಲ್ಲಿ ಅಕ್ಟೋಬರ್ ೧೨ರಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಈ ಅಪಘಾತ ಸಂಭವಿಸಿದೆ ಎಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುಂಡಳ್ಳಿಯ ಅಥರ್ವ ಮಾರುತಿ ದೇವಾಡಿಗ (೪) ಶಾಲೆಗೆ ರಜೆ ಇದ್ದ ಕಾರಣ ತನ್ನ ತಾಯಿಯೊಂದಿಗೆ ಸೋದರಮಾವನ ಮನೆಗೆ ಬಂದಿದ್ದನು. ಮನೆಯಲ್ಲಿದ್ದ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ, ಕಿರಾಣಿ ಅಂಗಡಿಯ ಮುಂಭಾಗದ ರಸ್ತೆ ಬದಿಯಲ್ಲಿ ಬೈಕ್ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಕ್ ಸವಾರ ಜನಾರ್ದನ ಕೊರಗಾ ದೇವಾಡಿಗ (೩೧) ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಪಘಾತದಿಂದ ಬಾಲಕನ ಬಲ ಕಾಲಿನ ಮೂಳೆ ಮುರಿದಿದ್ದು, ಬಲ ಕಾಲಿನ ಬೆರಳುಗಳಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಗಾಯಗೊಂಡ ಬಾಲಕನ ಸೋದರಮಾವ ವೆಂಕಟೇಶ ಶನಿಯಾರ ದೇವಾಡಿಗ ಅವರು ಅಕ್ಟೋಬರ್ ೧೪ರಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಭಟ್ಕಳ ಅಂಜುಮನ್ ಕಾಲೇಜಿಗೆ ಮೂರು ವಿಶ್ವವಿದ್ಯಾಲಯ ರ್ಯಾಂಕ್
ಮಂಗಳೂರಿನ ನೀರೇಶ್ವಾಲ್ಯ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಭಕ್ತಿಸಂಗೀತದ ಸಂಭ್ರಮ




