ಭಟ್ಕಳ ಡೈರಿ ವರದಿ

ಭಟ್ಕಳ: ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಟ್ಕಳದ ಯುವ ಪ್ರತಿಭೆ ಸಾಕ್ಷಿ ನಾಯ್ಕ ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ‘ಯುನಿವರ್ಸಿಟಿ ಬ್ಲೂ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ನಾಯ್ಕ ಉತ್ತಮ ಪ್ರದರ್ಶನ ನೀಡಿ ಈ ಗೌರವ ಪಡೆದಿದ್ದಾರೆ. ಇದರೊಂದಿಗೆ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತರ ವಿಶ್ವವಿದ್ಯಾಲಯ ದಕ್ಷಿಣ ಭಾರತ ವಲಯದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶ ಸಾಕ್ಷಿಗೆ ದೊರೆತಿದೆ.

ಭಟ್ಕಳ ತಾಲೂಕಿನ ಕವಿತಾ ನಾಯ್ಕ ಮತ್ತು ಪೊಲೀಸ್ ಇಲಾಖೆಯಲ್ಲಿ ಆರಕ್ಷಕರಾಗಿರುವ ದೇವು ನಾಯ್ಕ ಅವರ ಪುತ್ರಿಯಾಗಿರುವ ಸಾಕ್ಷಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಸಾಕ್ಷಿ ನಾಯ್ಕ ಅವರ ಆಯ್ಕೆ ಶ್ರೀ ಗುರು ಸುಧೀಂದ್ರ ಕಾಲೇಜು, ಭಟ್ಕಳ ತಾಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದೆ. ಅವರ ಮುಂದಿನ ಸ್ಪರ್ಧೆಗೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ :

ಕುಂಭಾಶಿಯಲ್ಲಿ ಸಂಗೀತಾರಾಧನೆ; ಕಲಾವಿದರಿಗೆ ಭಕ್ತರಿಂದ ಮೆಚ್ಚುಗೆ

೧೦ ಲಕ್ಷ ಗಿಡ ಬೆಳೆಸಿದ ಭಟ್ಕಳದ ಈ ವ್ಯಕ್ತಿಯ ಮುಂದಿನ ಗುರಿ ಏನು ಗೊತ್ತಾ? ಒಂದು ಕೋಟಿ!