ಭಟ್ಕಳ ಡೈರಿ ವರದಿ

ಭಟ್ಕಳ: ಮೂಡಭಟ್ಕಳ ಬೈಪಾಸ್ ಬಳಿ ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿರುವ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಪ್ರಕಾರ, ಅಕ್ಟೋಬರ್ ೧೯ರಂದು ಮಧ್ಯರಾತ್ರಿ ೧೨.೧೫ರ ಸುಮಾರಿಗೆ ಕುಂದಾಪುರ ಕಡೆಯಿಂದ ಭಟ್ಕಳದತ್ತ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಮೊಹಮ್ಮದ್ ಜಕ್ರೀಯ ಎಂಬವರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮೂಡಭಟ್ಕಳ ಬೈಪಾಸ್ ಬಳಿ ಭಟ್ಕಳದಿಂದ ಶಿರೂರು ಕಡೆಗೆ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದ ಮೊಹಮ್ಮದ್ ಧಾನೀಶ ಅವರ ಬೈಕ್‌ಗೆ ಎದುರುಗಡೆಯಿಂದ ಕಾರು ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಡಿಕ್ಕಿಯ ಪರಿಣಾಮ ಧಾನೀಶ ಅವರ ತಲೆ, ಬಲಗೈ ಹಾಗೂ ಬಲಗಾಲಿನ ಪಾದದ ಬಳಿ ಗಾಯಗಳಾಗಿವೆ. ಬಲಗಾಲಿನ ಬೆರಳಿನ ಎಲುಬಿಗೂ ತೀವ್ರ ಪೆಟ್ಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಾಳುವಿನ ಪತ್ನಿ ಯಾಸ್ಮೀನ್ ಅವರು ಅಕ್ಟೋಬರ್ ೨೧ರಂದು ರಾತ್ರಿ ೯ ಗಂಟೆಗೆ ಭಟ್ಕಳ ಶಹರ ಪೊಲೀಸ್ ಠಾಣೆಗೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :

ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಭಟ್ಕಳದ ಪ್ರತಿಭೆ ಸಾಕ್ಷಿ ನಾಯ್ಕ ಮಿಂಚು

ಸರ್ಪನಕಟ್ಟಾ ಕೋಣಾರ ಕ್ರಾಸ್‌ನಲ್ಲಿ ಕಾರು-ಬೈಕ್‌ಗೆ ಡಿಕ್ಕಿ; ಇಬ್ಬರು ಮಕ್ಕಳು, ದಂಪತಿಗೆ ಗಾಯ