ಭಟ್ಕಳ: ತಂತ್ರಜ್ಞಾನ ಪ್ರಗತಿ ಹೊಂದುತ್ತಿರುವಂತೆ ಅದರ ದುರುಪಯೋಗವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಕುಳಿತಲ್ಲಿಂದಲೇ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಖದೀಮರು ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂ. ಹಣವನ್ನು ಕ್ಷಣಾರ್ಧದಲ್ಲಿ ಲಪಟಾಯಿಸಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 4,40,000 ಹಣವನ್ನು ಖದೀಮರು ಲಪಟಾಯಿಸಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿಯನ್ನು ಕೇಶವ ಗೋವಿಂದ ಮೊಗೇರ( 62) ಎಂದು ತಿಳಿದುಬಂದಿದೆ. ಮೀನುಗಾರಿಕೆ ವೃತ್ತಿ ಮಾಡಿಕೊಂಡಿರುವ ಇವರು ತೆಂಗಿನಗುಂಡಿ ಹೆಬಳೆಯ ಮಾಸ್ತಿಮನೆ ನಿವಾಸಿಯಾಗಿದ್ದಾರೆ. ಇವರು ವ್ಯವಹಾರದ ಸಲುವಾಗಿ ಭಟ್ಕಳ ಬಂದರ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಕರಂಟ್ ಅಕೌಂಟ್ ಹೊಂದಿದ್ದರು. ಮೇ ೧೦ರಂದು ಸಂಜೆ ೪.೪೫ರ ಸುಮಾರಿಗೆ ಇವರ ಮೊಬೈಲ್ ಹ್ಯಾಕ್ ಮಾಡುವ ಮೂಲಕ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ. ಈ ಕುರಿತು ಸೈಬರ್‌ ಕ್ರೈಂ ಪ್ರಕರಣ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪಿ.ಐ. ಚಂದನ ಗೋಪಾಲ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಪ್ರಾಣಿ ಪಕ್ಷಿಗಳ ದಾಹ ನೀಗಿಸುವತ್ತ ರೋಟರಿ ಪರಿವಾರದ ಚಿತ್ತ