ಭಟ್ಕಳ: ದೇವರಿಗೆ ಹೂವು ಕೊಯ್ದುಕೊಂಡು ಬರುವ ವೇಳೆ ಆಕಸ್ಮಿಕವಾಗಿ ನೆಲಬಾವಿಯಲ್ಲಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ (Woman falls into well) ಭಟ್ಕಳ (Bhatkal) ತಾಲೂಕಿನ ಮಾರುಕೇರಿಯ ಹೆಜ್ಜಲದಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ಮಹಿಳೆ ಸ್ಥಳೀಯ ನಿವಾಸಿ ಸದಾಶಿವ ಹೆಬ್ಬಾರ (57) ಎಂದು ತಿಳಿದು ಬಂದಿದೆ. ಇವರು ಪ್ರತಿದಿನ ಬೆಳಗಿನ ಜಾವ ೫.೩೦ ಗಂಟೆಗೆ ಎದ್ದು ದೇವರಿಗೆ ಹೂವು ಕೊಯ್ದುಕೊಂಡು ಬರಲು ಹೋಗುತ್ತಿದ್ದರು. ಅದರಂತೆ ಮಂಗಳವಾರ ಸಹ ಹೂವು ಕೊಯ್ಯಲು ಹೋಗಿದ್ದ ವೇಳೆ ರಾಮಯ್ಯ ನಾಗಪ್ಪ ಗೊಂಡ ಇವರ ಅಡಿಕೆ ತೋಟದ ನೆಲಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ (Woman falls into well). ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೃತ ಮಹಿಳೆಯ ಪತಿ ದೂರು ನೀಡಿದ್ದಾರೆ (case filed).

ಇದನ್ನೂ ಓದಿ: arrested/ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ