ಭಟ್ಕಳ: ತಾಲೂಕಿನ ಹೊನ್ನೆಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ (Makkala Santhe) ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಕ್ಕಳ ಸಂತೆಯಲ್ಲಿ (Makkala Santhe) ಸುಮಾರು ೪೦ ಅಂಗಡಿ ಮಳಿಗೆಗಳು ಕಾರ್ಯನಿರ್ವಹಿಸಿದವು. ಇದರಲ್ಲಿ ಮಕ್ಕಳೇ  ಸ್ಯಾಂಡ್ವಿಚ್, ಪಾನಿಪುರಿ, ಗೋಬಿ ಮಂಚೂರಿ, ಜ್ಯೂಸ್ ಸಲಾಡ್, ತಯಾರು ಮಾಡಿ ಕೊಟ್ಟಿರುವುದು ಬಹಳ ವಿಶೇಷವಾಗಿತ್ತು, ತರಕಾರಿ, ಸೊಪ್ಪುಗಳು, ಕಾಯಿಪಲ್ಲೆ ಖಾದ್ಯಗಳು, ಒಣ ಮೀನು, ಸಿಯಾಳ, ಹಣ್ಣುಗಳು ಬಗೆ ಬಗೆಯ ತಿಂಡಿ ತಿನಿಸುಗಳು ಮತ್ತು ದಿನಬಳಕೆಯ ವಸ್ತುಗಳು ಎಲ್ಲರ ಮನಸೆಳೆಯಿತು. ಬಂದಂತಹ ಎಲ್ಲರೂ ಮಕ್ಕಳೊಡನೆ ವ್ಯಾಪಾರ ಮಾಡುತ್ತಾ ಮನರಂಜಿಸಿದರು.

honoured/ ಜನಮೆಚ್ಚಿದ ಶಿಕ್ಷಕಗೆ ಸಾಹಿತ್ಯ ಸಮ್ಮೇಳನದಲ್ಲಿ  ಸನ್ಮಾನ

ಮಕ್ಕಳ ಸಂತೆ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ಉದ್ಘಾಟಿಸಿದರು. ನಂತರ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಕ್ಕಳಲ್ಲಿ ವ್ಯವಹಾರಿಕ ಗಣಿತದ ಜ್ಞಾನ, ಕೌಶಲ್ಯ ಅಭಿವೃದ್ಧಿಯಾಗುವುದು ಎಂದು ಹೇಳಿದರು.

Rare turtle/ ಬಲೆಗೆ ಸಿಲುಕಿದ ಅಪರೂಪದ ಆಮೆ

ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಸಂತೆಯನ್ನು ವೀಕ್ಷಿಸಿ ಹೆಮ್ಮೆಯ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕ ಸಾರಿಂಗ ಟಿ ಮುಕ್ರಿ ಸ್ವಾಗತಿಸಿದರು. ಸತ್ಯವತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಹ ಶಿಕ್ಷಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮಡಿವಾಳ ಮತ್ತು ಪಾಲಕ ಪೋಷಕ ವರ್ಗದವರು ಉಪಸ್ಥಿತರಿದ್ದರು.

Motivational camp/ ೬೨೫ಕ್ಕೆ ೬೨೫ ಅಂಕ ಪಡೆದರೆ ೧೦,೦೦೦ ರೂ!