ಭಟ್ಕಳ(Bhatkal): ತಿರುಪತಿ ಬಾಲಾಜಿ ದೇವಸ್ಥಾನದ (Tirupati temple) ಲಡ್ಡು (Tirupati laddu) ಪ್ರಸಾದದಲ್ಲಿ ಪ್ರಾಣಿಕೊಬ್ಬಿನ ಎಣ್ಣೆ ಬೆರೆಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಭಟ್ಕಳದಲ್ಲಿ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಮಹಾ ಸಂಸ್ಥೆಯಿಂದ ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿ (prime minister) ಹಾಗೂ ಮುಖ್ಯಮಂತ್ರಿಗೆ (Chief minister) ಮನವಿ ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತಿರುಪತಿ ಬಾಲಾಜಿ ದೇವಸ್ಥಾನವು ಪ್ರಪಂಚದಾದ್ಯಂತ ಕೋಟಿಗಟ್ಟಲೆ ಭಕ್ತರ ಆರಾಧನೆಯ ಸ್ಥಳವಾಗಿದೆ. ಇದನ್ನು ಭಗವಾನ್ ಶ್ರೀ ವಿಷ್ಣುವಿನ ನಿಜವಾದ ಭೂವೈಕುಂಠವೆಂದು ಪರಿಗಣಿಸಲಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಪ್ರಸಾದದ ಲಾಡುಗಳಲ್ಲಿ (Tirupati Laddu)  ಪ್ರಾಣಿಗಳ ಕೊಬ್ಬಿನ ಎಣ್ಣೆಯನ್ನು ಬಳಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ (Andhra Pradesh) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರೇ ಈ ಮಾಹಿತಿಯನ್ನು ನೀಡಿದ್ದಾರೆ. ಇದರಿಂದಾಗಿ ದೇಶಾದ್ಯಂತ ಹಿಂದೂ ಸಮುದಾಯದಲ್ಲಿ ತೀವ್ರ ಆಕ್ರೋಶದ ಅಲೆ ಎದ್ದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ‌ ಮಾಹಿತಿ ನೀಡಿದ ಎಸ್ಪಿ ನಾರಾಯಣ ಎಂ.

ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಲಾಡು ಕೇವಲ ಆಹಾರವಲ್ಲ, ಅದು ಭಕ್ತರ ಶ್ರದ್ಧೆ, ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಭಾಗವಾಗಿದೆ. ಅಂತಹ ಪವಿತ್ರವಾದ ಪ್ರಸಾದದಲ್ಲಿ ಅಶುದ್ಧ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಅನುಚಿತ ಪದಾರ್ಥ, ಪ್ರಾಣಿಗಳ ಕೊಬ್ಬು ಬಳಸುವುದು ಭಕ್ತರಲ್ಲಿ ತೀವ್ರ ಕೋಪವನ್ನು ಉಂಟುಮಾಡಿದೆ. ಪವಿತ್ರವಾದ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸುವುದು ಒಂದು ಸಾಮಾನ್ಯ ಅಪರಾಧವಲ್ಲ. ಆದ್ದರಿಂದ ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಇದನ್ನೂ ಓದಿ : ಸೆಪ್ಟೆಂಬರ್‌ ೨೬ರಂದು ವಿವಿಧೆಡೆ ಅಡಿಕೆ ಧಾರಣೆ

ಈ ವೇಳೆ ನಿಚ್ಚಳಮಕ್ಕಿ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ, ಹೆಬ್ಬಳೆ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷ ಶ್ರೀಧರ ನಾಯ್ಕ, ದಕ್ಷಿಣ ಕಾಳಿಕಾ ದೇವಸ್ಥಾನದ ವಿಶ್ವಸ್ಥರು ಮತ್ತು ಸಮಾನ ಮನಸ್ಕ ಹಿಂದೂ ಸಂಘಟನೆಗಳ ಪಾದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ತಹಶೀಲ್ದಾರ ಸೂಚನೆ ಹಿನ್ನೆಲೆ ಅನಿರ್ದಿಷ್ಟಾವಧಿ ಮುಷ್ಕರ ಮೊಟಕು