ಭಟ್ಕಳ: ತಾಲೂಕಿನ ಗಡಿಭಾಗ ಶಿರೂರ ಪೊಲೀಸ್ ಚೆಕ್‌ಪೋಸ್ಟ್ ಹತ್ತಿರ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ (horrific accident) ಹಡವಿನಕೋಣೆ ನಿವಾಸಿ ಗೋಪಾಲ ಜಿ ಮೇಸ್ತ (೨೫) ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶುಕ್ರವಾರ ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಗಣೇಶ ಚೌತಿ ಕಾರ್ಯಕ್ರಮ ಮುಗಿಸಿ ಊಟಕ್ಕೆ ತೆರಳುತ್ತಿದ್ದಾಗ ಲಾರಿಗೆ ಬೈಕ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ (horrific accident). ಗೋಪಾಲ ಮೇಸ್ತ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಜೊತೆಗಿದ್ದ ಮನೋಜ್ ಮೇಸ್ತ ಗಂಭೀರ ಗಾಯಗೊಂಡು ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯ್ತು. ಬಳಿಕ ಕುಂದಾಪುರದ (Kundapura) ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೈಂದೂರು (Byndooru) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

ಇದನ್ನೂ ಓದಿ: arrested the accused/ ೧೨ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು