ಭಟ್ಕಳ: ನಗರದ ಅಭಿವೃದ್ಧಿಗೆ ಹೊಸ ದಾರಿ ತೆರೆಯುವಂತಹ ಮಹತ್ವದ ನಿರ್ಧಾರವೊಂದನ್ನು ರಾಜ್ಯ ಸರ್ಕಾರ ಗುರುವಾರ ತೆಗೆದುಕೊಂಡಿದೆ. ಭಟ್ಕಳ (Bhatkal) ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ಮತ್ತು ಹೆಬಳೆ ಗ್ರಾಮ ಪಂಚಾಯತಿಗಳನ್ನು ಒಂದಾಗಿ ಸೇರಿಸಿ, ಭಟ್ಕಳವನ್ನು ಇದೀಗ ನಗರಸಭೆ (Municipal Council) ಆಗಿ ಘೋಷಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಗುರವಾರ ಅಂಗೀಕರಿಸಿದ್ದು, ಇದರಿಂದ ಭಟ್ಕಳಕ್ಕೆ ಹೆಚ್ಚಿನ ಆರ್ಥಿಕ ನೆರವು, ಉತ್ತಮ ಮೂಲಸೌಕರ್ಯಗಳು ಮತ್ತು ಸ್ಥಳೀಯ ಆಡಳಿತದಲ್ಲಿ ಸ್ವತಂತ್ರತೆ ದೊರೆಯಲಿದೆ. ಭಟ್ಕಳದ ಶಾಸಕ ಮತ್ತು ಬಂದರು-ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ (Mankal Vaidya), ಈ ನಿರ್ಧಾರವನ್ನು ((Municipal Council)) ಸ್ವಾಗತಿಸಿದ್ದಾರೆ. ಈ ನಿರ್ಧಾರ ಭಟ್ಕಳದ ಅಭಿವೃದ್ಧಿಗೆ ದೊಡ್ಡ ಹೆಜ್ಜೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Life jacket/ 9 ಮೀನುಗಾರರ ಜೀವ ಉಳಿಸಿದ ಲೈಫ್ ಜಾಕೆಟ್



